ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧು ಇಲಾಖೆಯ ಮೋರಟಗಿ ವಲಯದ ಗಬಸಾವಳಗಿ ಅಂಗನವಾಡಿ-೦೨ನೇ ಕೇಂದ್ರದ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ತಯಾರಿಸಲ್ಪಟ್ಟ ರಾಖಿಗಳನ್ನು ಪೋಲೀಸ ಇಲಾಖೆಗೆ ತೆರಳಿ ಪಿಎಸ್‌ಐ ಆರೀಫ್ ಮುಷಾಪುರಿ ಹಾಗೂ ಇಲಾಖೆ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ಆಚರಣೆ ಮಾಡಲಾಯಿತು.
ಅಂಗನವಾಡಿ ಮಕ್ಕಳು ಮತ್ತು ಕಾರ್ಯಕರ್ತೆಯರಿಂದ ತಯಾರಿಸಲ್ಪಟ್ಟ ರಾಖಿಗಳನ್ನು ವೀರ ಯೋಧರಿಗೆ ಅಂಚೆ ಮೂಲಕ ಕಳುಹಿಸಿಕೊಡಲಾಗಿದೆ. ಇದೇ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಶೈಲಶ್ರೀ ಪಾಟೀಲ, ಗಬಸಾವಳಗಿ-೦೨ ನೇ ಕೇಂದ್ರ ಅಂಗನವಾಡಿ ಕಾರ್ಯಕರ್ತೆ ಕಲಾವತಿ ವಾಲಿಕಾರ, ರಾಷ್ಠ್ರೀಯ ಪೋಷಣಾ ಅಭಿಯಾನ ಯೋಜನೆಯ ತಾಲೂಕು ಸಂಯೋಜಕ ಪ್ರಮೊದ ಬೆಳಗಾವಿ ಸೇರಿದಂತೆ ಅನೇಕರು ಇದ್ದರು.