ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಯೋಜನಾ ಶಾಖೆ ಆಲಮಟ್ಟಿ ಇವರು ಪ್ರತಿ ವರ್ಷದಂತೆ, ಈ ವರ್ಷವು ಕೂಡಾ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಕ್ರೀಡಾ ಕೂಟಗಳನ್ನು ಹಾಗೂ ನೇತ್ರದಾನ ಮತ್ತು ರಕ್ತಾದಾನ ಶಿಬಿರವನ್ನು ಆಯೋಜಿಸಿದ್ದರು.
ಕ್ರೀಕೆಟ್ ಪಂದ್ಯಾವಳಿಗಳನ್ನು ಮುಖ್ಯ ಅಭಿಯಂತರ ಶಬಸವರಾಜ.ಡಿ ಇವರು ಉದ್ಘಾಟಿಸಿದ ಪಂದ್ಯದಲ್ಲಿ ೪ ತಂಡಗಳು ಭಾಗವಹಿಸಿದ್ದು ಅದರಲ್ಲಿ ಸರಕಾರಿ ನೌಕರರ ಸಂಘ ಪ್ರಥಮ ಸ್ಥಾನ ಮತ್ತು ಕೆ.ಬಿ.ಜೆ.ಎನ್.ಎಲ್ ಇಂಜಿನೀಯರ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು. ಮಹಿಳೆಯರಿಗಾಗಿ ಆಯೋಜಿಸಿದ ಮ್ಯೂಜಿಕಲ್‌ಚೇರ ಮತ್ತು ಶೇಟಲ್ ಬ್ಯಾಡ್ಮಿಟನ್ ಕ್ರೀಡೆಯನ್ನು ಮಾನ್ಯ ಅಧೀಕ್ಷಕ ಅಭಿಯಂತರ ವ್ಹಿ.ಆರ್.ಹಿರೇಗೌಡರ, ಇವರು ಉದ್ಘಾಟಿಸಿದ ಪಂದ್ಯಗಳಲ್ಲಿ ಗೌರಮ್ಮ ಪ್ರಥಮ ಮತ್ತು ಸೌಮ್ಯಾಶ್ರೀ ಹಿರೇಗೌಡರ ಇವರು ಮ್ಯೂಜಿಕಲ್‌ಚೇರ ಕ್ರೀಡೆಯಲ್ಲಿ ದ್ವಿತೀಯ ಸ್ಥಾನದ ಪಡೆದುಕೊಂಡರು ಅದರಂತೆ, ಮಹಿಳೆಯರಿಗಾಗಿ ನಡೆಸಲಾದ ಸಿಂಗಲ್ ಸೆಟಲ್ ಬ್ಯಾಡ್ಮಿಟನ್ ಪಂದ್ಯದಲ್ಲಿ . ವಿದ್ಯಾಶ್ರೀ ವಾಸಿ ಪ್ರಥಮ ಹಾಗೂ ಶ್ವೇತಾ ಅರಕೇರಿ ದ್ವಿತೀಯ ಸ್ಥಾನ ಪಡೆದುಕೊಂಡರು. ಅದರಂತೆ, ಶೇಟಲ್ ಬ್ಯಾಡ್ಮಿಟನ್ ಪಂದ್ಯಾವಳಿಗಳಲ್ಲಿ ವಿದ್ಯಾಶ್ರೀ ವಾಸಿ ಮತ್ತು ವೀಣಾ ಬಿಸನಾಳ ಪ್ರಥಮ ಸ್ಥಾನ ಪಡೆದುಕೊಂಡು ದ್ವಿತೀಯ ಸ್ಥಾನವನ್ನು ಮಹೇಶ್ವರಿ ಜಿ.ಪಾಟೀಲ ಮತ್ತು ಗೌರಮ್ಮ ಇವರು ಪಡೆದರು.
ಅದರಂತೆ, ಪುರಷ ನೌಕರರಿಗಾಗಿ ಹಮ್ಮಿಕೊಂಡಿದ್ದ ಸಿಂಗಲ್ ಬ್ಯಾಡ್ಮಿಟನ್ ಪಂದ್ಯದಲ್ಲಿ ಅಕ್ಷಯ ದೇಸಾಯಿ. ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾವನ್ನು ರಾಜಶೇಖರ ಹಿರೇಮಠ ಪಡೆದುಕೊಂಡರು.
ಡಬಲ್ಸ್ ಪಂದ್ಯಾವಳಿಯಲ್ಲಿ ಅಕ್ಷಯ ದೇಸಾಯಿ ಹಾಗೂ ರಾಜಶೇಖರ ಹಿರೇಮಠ ಪ್ರಥಮ ಸ್ಥಾನ ಅಭಿಷೇಕ ಕನ್ನೂರ ಹಾಗೂ ಮಾರುತಿ ಪೂಜಾರಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಅದರಂತೆ ವ್ಹಾಲಿಬಾಲ ಪಂದ್ಯಾವಳಿಗಳನ್ನು ಮಾನ್ಯ ಮುಖ್ಯ ಅಭಿಯಂತರರು, ಬಸವರಾಜ.ಡಿ ಇವರು ಉದ್ಘಾಟಿಸಿದ ಪಂದ್ಯಗಳಲ್ಲಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿರುವ ಬಸವರಾಜ ಬನ್ನೂರ ಇವರ ನಾಯಕತ್ವದ ತಂಡ ಪ್ರಥಮ ಸ್ಥಾನ ಪಡೆದುಕೊಂಡು ಹಾಗೂ ನೌಕರರ ಸಂಘದ ಆಂತರಿಕ ಲೆಕ್ಕ ಪರಿಶೋಧಕರಾಗಿರುವ ಶ್ರೀನಿವಾಸ. ಎಮ್. ಇವರ ನಾಯತಕ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು ಈ ಎಲ್ಲಾ ಕ್ರೀಡಾಕೂಟಗಳನ್ನು ಆ.೧೧ ರಿಂದ ಆ.೧೨ ವರೆಗೆ ಆಲಮಟ್ಟಿಯ ವಿವಿಧ ಕ್ರೀಡಾಂಗಣದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ಅತ್ಯಂತ್ಯ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಟ್ಟರು.
ಆ.೧೪ ರಂದು ನಡೆದ ನೇತ್ರದಾನ ಮತ್ತು ರಕ್ತದಾನ ಶಿಬಿರವನ್ನು ಮಾನ್ಯ ಬಸವರಾಜ.ಡಿ ಮುಖ್ಯ ಅಭಿಯಂತರರು, ಇವರು ಉದ್ಘಾಟಿಸಿದರು.
ಸಂಘವು ೩ನೇಯ ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಕಳೆದ ಬಾರಿ ನಡೆಸಲಾದ ರಕ್ತದಾನ ಶಿಬಿರದಲ್ಲಿ ೧೦೩ ಜನ ರಕ್ತದಾನ ಮಾಡಿದ್ದರು. ಈ ಬಾರಿ ಈ ವರ್ಷ ೧೦೪ ಜನ ರಕ್ತಾದಾನವನ್ನು ಮಾಡಿದ್ದು, ಒಟ್ಟು ೧೩ ಜನ ನೇತ್ರದಾನದ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅಧೀಕ್ಷಕ ಅಭಿಯಂತರರಾಗಿರುವ ಶ್ರೀ.ವ್ಹಿ.ಆರ್.ಹಿರೇಗೌಡರ, ತಾಂತ್ರಿಕ ಸಹಾಯಕರಾಗಿರುವ ಎಮ್.ಆರ್.ಬಾಗವಾನ, ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ: ಪ್ರಕಾಶ ಗೌಡ ಕಂಡಕಿ, ಹಿರಿಯ ಆರೋಗ್ಯಾಧಿಕಾರಿಗಳಾಗಿರುವ ಡಾ: ರಜಕುಮಾರ, ವಲಯ ಅರಣ್ಯಾಧಿಕಾರಿಗಳಾಗಿರುವ ಮಹೇಶ.ಪಾಟೀಲ್ ಮತ್ತು ನೌಕರರ ಸಂಘದ ಶ್ರೀ.ಬಿ.ಜಿ.ಬನ್ನೂರ, ಮಹಾಂತೇಶ ಒಡೆಯರ, ವೈ.ಎಮ್.ಪಾತ್ರೋಟ, ಶ್ರೀರಕ್ಷಾ ಎಮ್.ಆರ್, ರಪೀಕ ಚಪ್ಪರಬಂದ, ಮತಿತ್ತರು ಮತ್ತು ಆಶಾ ಕಾರ್ಯಕರ್ತರಾದ ವಿದ್ಯಾ ಪೂಜಾರಿ ಮತ್ತು ಸುನಿತಾ ಲಮಾಣಿ ಹಾಗೂ ಕೆ.ಬಿ.ಜೆ.ಎನ್.ಎಲ್ ಆರೋಗ್ಯ ಘಟಕದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಹಾಗೂ ನಿಡಗುಂದಿ ತಾಲೂಕು ಮತ್ತು ವಿಜಯಪುರ ಜಿಲ್ಲೆಯ ಆರೋಗ್ಯ ಇಲಾಖೆಯ ಡಾ: ಈರಣ್ಣಾ ಬಂಡಿ, ಗೀರಿಶ ಹೂಗಾರ ಮತ್ತಿತರ ರಕ್ತದಾನ ಶಿಬಿರವನ್ನು ಇಲಾಖೆಯಿಂದ ನಡೆಸಿಕೊಟ್ಟರು.