ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಸಂಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಕರ್ನಾಟಕ ಪ್ರೇಸ್ ಕ್ಲಬ್ ಸಂಘಟನೆ ವತಿಯಿಂದ 5ಸಾವಿರ ನಗದು ಹಣವನ್ನು ಸಹಾಯ ಮಾಡಲಾಯಿತು.
ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಕಾಂತ ತೇರದಾಳ ಮಾತನಾಡಿ, ಅತೀ ಕಡುಬಡತನದ ಕುಟುಂಬಗಳಿಗೆ ನಮ್ಮ ಸಂಘಟನೆಯಿಂದ ಕೈಲಾದಷ್ಟು ಸಹಾಯವನ್ನು ಮಾಡುವ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದ್ದು ಬಿದ್ದಿರುತ್ತದೆ. ಮೇಲ್ಛಾವಣಿ ದುರಸ್ತಿ ಮಾಡಿಕೊಳ್ಳಲು ನಮ್ಮ ಸಂಘಟನೆಯು ಸಹಾಯ ಮಾಡಲು ಮುಂದಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜಕುಮಾರ ಪಾಟೀಲ, ಕೇದಾರೆಪ್ಪ ರಾವಳೋಜಿ, ರವಿಕುಮಾರ ಶಿಂಗೆ, ದಿಲೀಪ ದಾಶ್ಯಾಳ, ಪ್ರವೀಣ ಹೊಳೆಪ್ಪಗೋಳ, ನಿಂಗರಾಜ ಬೆಳನ್ನವರ, ಕಿರಣ ಪವಾರ, ಗಜಾನಂದ ಕಾಂಬಳೆ, ಗುಲಾಬ ತೇರದಾಳ ಸೇರಿದಂತೆ ಇತರರು ಇದ್ದರು.