ವೀರ ರಾಣಿ ಕಿತ್ತೂರು ಚನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಕೋಶಾಧ್ಯಕ್ಷ ಶಂಕರಗೌಡ ಪಾಟೀಲ (ಸವನಳ್ಳಿ), ಉಪಾಧ್ಯಕ್ಷ ಬಿ.ಎಸ್ ಬಿರಾದಾರ (ಬಾಗಾದಿ) ಹಾಗೂ ಸಮಿತಿ ಸದಸ್ಯರ ಸ್ಪಷ್ಠನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ, ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆಯನ್ನು ಆ. 23 ರಂದು ಲೋಕಾರ್ಪಣೆಗೊಳಿಸಲಾಗುವುದೆಂದು ಪತ್ರಿಕೆಯಲ್ಲಿ ಬಂದ ಪ್ರಕಟಣೆ ಸತ್ಯಕ್ಕೆ ದೂರವಾಗಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿನಾಂಕ ನಿಗದಿಪಡಿಸುವ ಮೊದಲು ಜಿಲ್ಲಾಡಳಿತದೊಂದಿಗೆ ನಾವು ಈ ಕಾರ್ಯಕ್ಕೆ ನೆರವಾಗಿರುವ ಹಾಗೂ ಈ ಮೂರ್ತಿ ಪ್ರತಿಷ್ಠಾಪನೆಗೆ ಕಾರಣರಾಗಿ, ನಮಗೆ ಬಸ್ ನಿಲ್ದಾಣದ ಹೃದಯ ಭಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ನಿವೇಶನ ಒದಗಿಸಿದ ಹಾಗೂ ನಾಲ್ಕು ದಶಕಗಳಿಂದ ನೆನಗುದಿಗೆ ಬಿದಿದ್ದ ಈ ಕಾರ್ಯಕ್ಕೆ ನಿವೇಶನ ಒದಗಿಸಿದ್ದು ಮಾತ್ರವಲ್ಲದೇ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ಮಾಡಿಸಿರುವುದರ ಜೊತೆಗೆ ರಾಣಿ ಚನ್ನಮ್ಮನವರ ಹೆಸರು ಚಿರಸ್ಥಾಯಿಯಾಗಲೆಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮನವರ ಹೆಸರಿಡಲು ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಮ್.ಬಿ ಪಾಟೀಲರನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರನ್ನು, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕರು ವಿಧಾನ ಪರಿಷತ್ತ ಸದಸ್ಯರು. ಈ ಮೂರ್ತಿ ಪ್ರತಿಷ್ಠಾನೆಗೆ ದೇಣಿಗೆ ನೀಡಿ ಸಹಕಾರ ನೀಡಿದ ಸರ್ವರನ್ನು ಸಂಪರ್ಕಿಸಿ ಜಿಲ್ಲಾಡಳಿತ ಹಾಗೂ ಪೂಜ್ಯರು ಮತ್ತು ಸಮಾಜದ ಮುಖಂಡರೊಂದಿಗೆ ಚರ್ಚಿಸಿದ ನಂತರ ದಿನಾಂಕ ಗೊತ್ತು ಮಾಡಲಾಗುವುದೆಂದು ವೀರ ರಾಣಿ ಕಿತ್ತೂರು ಚನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಕೋಶಾಧ್ಯಕ್ಷರಾದ ಶಂಕರಗೌಡ ಪಾಟೀಲ (ಸವನಳ್ಳಿ), ಉಪಾಧ್ಯಕ್ಷರಾದ ಬಿ.ಎಸ್ ಬಿರಾದಾರ (ಬಾಗಾದಿ)ರವರು ಹಾಗೂ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ವ್ಯಕ್ತಿ ಸಮಿತಿಯ ಅಧ್ಯಕ್ಷನೆಂದು ಹೇಳಿಕೊಂಡಿದ್ದಾನೋ, ಆತನಿಗೆ ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚಿಸದೇ ಹಾಗೂ ಎಲ್ಲ ಸಮುದಾಯದ ಜನರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಎಲ್ಲರ ದೇಣಿಗೆ ಪಡೆದು ಸರ್ಕಾರಿ ಜಾಗೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾದಲ್ಲಿ ಇರಬೇಕಾದ ಸರ್ಕಾರದ ಶಿಷ್ಟಾಚಾರದ ಅರಿವು ಅಧ್ಯಕ್ಷನೆಂದು ಹೇಳಿಕೊಳ್ಳುವವನಿಗೆ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಜೊತೆಗೆ ನಾವು ಅಧಿಕೃತವಾಗಿ ಸಮಿತಿಯನ್ನು ನೊಂದಣಿ ಮಾಡಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿರುವುದರಿಂದ ಪಾರದರ್ಶಕವಾಗಿ ಅದರ ಲೆಕ್ಕ ಪತ್ರದ ವಿವರವನ್ನು ಸಮಾಜದ ಮುಖಂಡರಿಗೆ ದೇಣಿಗೆ ನೀಡಿದವರಿಗೆ ತಿಳಿಸಿ, ಅದರ ವಿವರಗಳನ್ನು ಜಿಲ್ಲಾಡಳಿತಕ್ಕೂ ಕೊಟ್ಟು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಬೇಕೆಂಬ ಸಾಮಾನ್ಯ ಜ್ಞಾನ ಅಧ್ಯಕ್ಷನೆಂದು ಹೇಳಿಕೊಂಡು ಏಕಪಕ್ಷಿಯವಾಗಿ ತಾನೇ ತನ್ನ ಸ್ವಂತ ಜಾಗೆಯಲ್ಲಿ ಮೂರ್ತಿ ಕೂಡಿಸುತ್ತಿರುವನೆನೋ ಎನ್ನುವ ಭ್ರಮೆಯಲ್ಲಿರುವಂತೆ ವರ್ತಿಸುತ್ತಿರುವ ಹಾಗೂ ಏಕಪಕ್ಷಿಯವಾಗಿ ಉದ್ಘಾಟನೆಯ ದಿನಾಂಕವನ್ನು ಯಾರಿಗೂ ತಿಳಿಸದೇ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಉದ್ಘಾಟನೆ ದಿನಾಂಕವನ್ನು ಪ್ರಕಟಿಸುವ ಅಧಿಕಾರವನ್ನು ಈತನಿಗೆ ಯಾರು ಕೊಟ್ಟಿದ್ದಾರೆ? ಎಂದು ಸಮಿತಿಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಮುಖಂಡರೆಲ್ಲರೂ ಸೇರಿ ಮೂರ್ತಿ ಪ್ರತಿಷ್ಠಾಪನೆಗೆ ಕಾರಣರಾಗಿರುವ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ, ನಗರ ಶಾಸಕರು, ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ತ ಸದಸ್ಯರನ್ನು ಹಾಗೂ ದೇಣಿಗೆ ನೀಡಿರುವ ಸರ್ವ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸಲಾಗುವುದು. ಜೊತೆಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ, ನಗರ ಶಾಸಕರಿಗೆ ಮತ್ತು ಇತರ ಮುಖಂಡರೆಲ್ಲರಿಗೂ ನಾವೆಲ್ಲರೂ ಚರ್ಚಿಸಿ ಮುಖ್ಯಮಂತ್ರಿಗಳ ದಿನಾಂಕವನ್ನು ಗೊತ್ತುಪಡಿಸಲು ಮನವಿ ಮಾಡಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಗಳು ಕೊಡುವ ದಿನಾಂಕದಂದು ಉಸ್ತುವಾರಿ ಸಚಿವರು ಹಾಗೂ ಸಮಾಜದ ಪೂಜ್ಯರೊಂದಿಗೆ, ಹಿರಿಯರೊಂದಿಗೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸಲಾಗುವುದು. ಸಮಾಜ ಬಾಂಧವರು ಇಂತಹ ತಪ್ಪು ಮಾಹಿತಿ ನೀಡುವ ವ್ಯಕ್ತಿಯಿಂದಾಗಿ ಗೊಂದಲಕ್ಕೆ ಒಳಗಾಗಬಾರದೆಂದು ಸಮಾಜದ ಮುಖಂಡರು ಸಾರ್ವಜನಿಕರು ಹಾಗೂ ಜಿಲ್ಲಾಡಳಿತಕ್ಕೆ ವಿನಂತಿಸಿಕೊಳ್ಳುವುದಾಗಿ ಕೋಶಾಧ್ಯಕ್ಷರು, ಉಪಾಧ್ಯಕ್ಷರು, ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದು, ಯಾರೊಂದಿಗೂ ಚರ್ಚಿಸದೇ ತನ್ನ ರಾಜಕೀಯ ಸ್ವಾರ್ಥಕ್ಕಾಗಿ, ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ರಾಣಿ ಚೆನ್ನಮ್ಮ ಮತ್ತು ಸಮಾಜದ ಹೆಸರು ಈ ವ್ಯಕ್ತಿ ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದೆಂದು ಸಮಿತಿಯ ಸದಸ್ಯರು ಹಾಗೂ ಸಮಾಜದ ಹಿರಿಯ ಮುಂಖಡರುಗಳಾದ ವೈ.ಎನ್ ಬಿರಾದಾರ ಹಾಗೂ ರಾಜುಗೌಡ ಕುದುರಿಸಾಲವಡಿಗೆ ಆರ್.ಜಿ ಯರನಾಳ, ಗುರುಶಾಂತ ನಿಡೋಣಿ, ಶ್ರೀಶೈಲ ಆರ್ ಬುಕ್ಕಟ್ಟೆ, ಎ.ಎಸ್ ಪಾಟೀಲ, ಬಿ.ಜಿ ಬಿರಾದಾರ, ಚನ್ನಪ್ಪ ಕೊಪ್ಪದ, ಸಂಗಮೇಶ ಬಬಲೇಶ್ವರ, ಅರ್ಜುನ ಶಿರೂರ, ಈರಗೊಂಡ ಬಿರಾದಾರ, ಬಸಪ್ಪ ಗಲಗಲಿ ಸಮಾಜದ ಮುಖಂಡರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.