ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜಯಪುರ, ಎನ್‌ಎಸ್‌ಎಸ್ ಘಟಕ-1 ಮತ್ತು ಘಟಕ-2 ಸಹಯೋಗದಲ್ಲಿ ಗುರುವಾರ ಹರ್ ಘರ್ ತಿರಂಗಾ ಅಭಿಯಾನ-2025 ಕ್ಕೆ ಚಾಲನೆ ನೀಡಲಾಯಿತು.
ಮನೆಮನೆಗೆ ಎನ್‌ಎಸ್‌ಎಸ್ ಸ್ವಯಂಸೇವಕರು ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿ, ನಮ್ಮ ರಾಷ್ಟ್ರದ ಬಗ್ಗೆ ದೇಶಭಕ್ತಿಯ ಭಾವನೆಗಳನ್ನು ಬೆಳೆಸಲು ಮತ್ತು ಹರ್ ಘರ್ ತಿರಂಗ ಹಾರಿಸುವ ಆಚರಣೆಯನ್ನು ಉತ್ತೇಜಿಸಲು ಭಾರತ ಮಾತಾ ಕಿ ಜೈ , ವಂದೇ ಮಾತರಂ ಎಂದು ಘೋಷಣೆಗಳನ್ನು ಕೂಗಿ ರಾಷ್ಟ್ರಭಕ್ತಿಯನ್ನು ಮೂಡಿಸಿ ಮತ್ತು ಪ್ರತಿ ಮನೆಗೆ ರಾಷ್ಟ್ರಧ್ವಜವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಅರ್.ಎಂ.ಮಿರ್ಧೆ, ಉಪಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಂಯೋಜಕ ಗಂಗಾಧರ್ ಅಗಸರ್,ಎನ್ ಎಸ್ ಎಸ್ ಘಟಕ ೧ & ೨ ರ ಅಧಿಕಾರಿಗಳಾದ ಡಾ.ತರನ್ನುಮ್ ಜಬೀನ್ ಖಾನ್, ಡಾ.ಮಿಲನ್ ರಾಠೋಡ್, ದೈಹಿಕ ನಿರ್ದೇಶಕ ಎಸ್.ಕೆ ಪಾಟೀಲ ಎನ್ ಎಸ್ ಎಸ್ ಸ್ವಯಂ ಸೇವಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.