Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾವರಶ್ಮಿ»ಎಲ್ಲಿದೆ ಸ್ವಾತಂತ್ರ್ಯ? ಯಾರಿಗೆ ಲಭಿಸಿದೆ ಸ್ವಾತಂತ್ರ್ಯ?
ಭಾವರಶ್ಮಿ

ಎಲ್ಲಿದೆ ಸ್ವಾತಂತ್ರ್ಯ? ಯಾರಿಗೆ ಲಭಿಸಿದೆ ಸ್ವಾತಂತ್ರ್ಯ?

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ.ಮಲ್ಲಿಕಾರ್ಜುನ ಆಲಮೇಲ
ಯಡ್ರಾಮಿ
ಕಲಬುರ್ಗಿ ಜಿಲ್ಲೆ
ಮೊ: ೯೭೪೦೪೯೯೮೧೪

ಉದಯರಶ್ಮಿ ದಿನಪತ್ರಿಕೆ

“ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ”

ಈ ಕವಿತೆ ( ಗೀತೆ )ಬಂಡಾಯ ಸಾಹಿತಿ ಅಂತಲೇ ಚಿರಪರಿಚಿತರಾಗಿದ್ದ ಡಾ.ಸಿದ್ದಲಿಂಗಯ್ಯರವರು, ಸ್ವಾತಂತ್ರ್ಯದ ಬರೆದ ಒಂದು ಉತ್ಕೃಷ್ಟ ಕಾವ್ಯವಾಗಿದೆ, ಇದನ್ನವರು ಇಲ್ಲಿಯ ವ್ಯವಸ್ಥೆಯ ಕಂಡು, ನೊಂದು ಬೇಸರದಿ ಆಕ್ರೋಶ ಭರಿತವಾಗಿ ಬರೆದಿದ್ದಾರೆ. ಅವರ ಪ್ರತಿ ಸಾಲುಗಳು ಅಕ್ಷರಶಃ ಸತ್ಯವಾಗಿವೆ.
ಆಗಸ್ಟ 14ರ ಮಧ್ಯರಾತ್ರಿ ಆಂಗ್ಲ ಕ್ಯಾಲೆಂಡರ ಪ್ರಕಾರ 15ನೇ ತಾರೀಖ, 1947ರಂದು ಲಭಿಸಿದ ಸ್ವಾತಂತ್ರ್ಯ ಏನಾಯಿತು? ಎಲ್ಲಿಗೆ ಹೋಯಿತು? ಆಂಗ್ಲರ ಜೊತೆಯೇ ಬೆನ್ನುಹತ್ತಿ ಹೋಯಿತೇ, ಭವಿಷ್ಯ ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿರುವದಕ್ಕೆ ಅದಕ್ಕಿನ್ನೂ ಬೆಳಕಿನೆಡೆಗೆ ಬರಲು ಸಾದ್ಯವಾಗುತ್ತಿಲ್ಲವೇನೋ.? ಎಂತಹ ವಿಪರ್ಯಾಸವಲ್ಲವೇ?
ನಮ್ಮ ಸ್ವಾತಂತ್ರ್ಯವನ್ನು ನಾವೇ ಹುಡುಕುತ್ತಿದ್ದೇವೆ. ಸ್ವಾತಂತ್ರ್ಯದ ಹೆಸರಲ್ಲಿ, ಬಾರು, ಪಬ್ಬು, ಕ್ಲಬ್ ಗಳಲ್ಲಿ ಮೋಜು, ಮಸ್ತಿ ಮಾಡುತ್ತಿದ್ದೇವೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಳವಡಿಸಿಕೊಳ್ಳಲು ಹೋಗಿ ಅವಿವೇಕಿಗಳಾಗುತ್ತಿದ್ದೇವೆ ಅಲ್ಲವೇ?
ಎಲ್ಲಿದೆ ಸ್ವಾತಂತ್ರ್ಯ? ಯಾರಿಗೆ ಲಭಿಸಿದೆ ಸ್ವಾತಂತ್ರ್ಯ ?


ಒಂದು ಮೃತ್ಯು ( ಡೆತ್ ಸರ್ಟಿಫಿಕೇಟ್ ) ಪ್ರಮಾಣ ಪತ್ರಕ್ಕಾಗಿಯೂ ಸಹ ಲಂಚ ಬೇಡುವ ಭ್ರಷ್ಟ ಅಧಿಕಾರಿಗಳಿಗೆ, ಸಮಾನತೆಯ ಸಸಿನೆಟ್ಟು ಬೆಳೆಸಿ, ಸರ್ವರು ಸಾಮರಸ್ಯದಿ ಬಾಳುವಂತೆ ಮಾಡುವದು ಬಿಟ್ಟು, ಜಾತಿ, ಮತದ ವಿಷಬೀಜ ಬಿತ್ತಿ, ತಮ್ಮ ಬೇಳೆ ಬೇಯಿಕೊಳ್ಳುತ್ತಿರುವ ದುಷ್ಟ ರಾಜಕಾರಣಿಗಳಿಗೆ, ಜನರ ಜೀವವನ್ನೆ ಕ್ರಿಮಿಗಳಂತೆ ಹೊಸಕಿ ಹಾಕೋ ನೀಚ – ನಿಕೃಷ್ಟ ಭೂಗತಲೋಕದ ಪಾತಕಿಗಳಿಗೆ, ಪವಿತ್ರ ಕಾವಿಯ ತೊಟ್ಟು ಜನತೆಯನ್ನು ಸನ್ಮಾರ್ಗದಿ ನಡೆಸಬೇಕಾದ ಸ್ಥಾನದಿ ಕುಳಿತು ಕಾಮ ಪಿಶಾಚಿಗಳಾಗಿರುವ ನಕಲಿ ಸನ್ಯಾಸಿಗಳಿಗೆ, ಇಂತಾ ದಟ್ಟ ದರಿದ್ರರಿಗೆ ಲಭಿಸಿದೆಯೇ ಸ್ವಾತಂತ್ರ್ಯ? ದೀನ, ದಲಿತ, ಸುಜನತೆಯ ಬಾಳು ನರಕವಾಗಿದೆ, ಜಾರಣಿಯ ಸಂತಾನ ಹಾರ್ಯಾಡಿ ಮೆರೆಯುತ್ತಿದೆ, ಗರತಿಯ ಸಂತಾನ ಬಿಕ್ಕಿ ಬಿಕ್ಕಿ ಅಳುತ್ತಿದೆ ಅನ್ನುವಂತ ಪರಿಸ್ಥಿತಿ. ಅದೆಷ್ಟೋ ಮಹಾನ್ ತೇಜಸ್ಸು ತುಂಬಿದ (ವ್ಯಕ್ತಿಗಳಾದ ) ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವಿನಾಯಕ ದಾಮೋದರ ಸಾವರ್ಕರ, ಮಹಾತ್ಮಗಾಂಧಿ, ಸರ್ದಾರ ವಲ್ಲಭಭಾಯ್ ಪಟೇಲ, ಲೋಕಮಾನ್ಯ ಬಾಲ ಗಂಗಾಧರನಾಥ ತಿಲಕ, ಸುಭಾಷ್ ಚಂದ್ರಬೋಸ್ ಲಾಲ್ ಬಹಾದ್ದೂರ ಶಾಸ್ತ್ರೀ, ಜವಾಹರಲಾಲ್ ನೆಹರು, ಟಿಪ್ಪು ಸುಲ್ತಾನ್, ಲಾಲ್ ಬಹಾದ್ದೂರ್ ಶಾಸ್ತ್ರಿ,, ಮದನ ಮೋಹನ ಮಾಳವೀಯ, ಸರ್ದಾರ್ ಭಗತ್ ಸಿಂಗ್, ರಾಜಗೋಪಾಲಚಾರಿ, ಭಿಕಾಜಿ ಕಾಮಾ (ಮೇಡಂ ಕಾಮಾ) ಚಂದ್ರಶೇಖರ್ ಆಝಾದ್, ಮ್ ಪ್ರಸಾದ್ ಬಿಸ್ಮಿಲ್ಸುಬ್ರಹ್ಮಣ್ಯ ಭಾರತಿಖುದೀರ, ಝಾನ್ಸಿ ರಾಣಿ ಲಕ್ಷ್ಮೀ ಬಾಯೀ, ಸರೋಜಿನಿ ನಾಯ್ಡು, ಜಯಪ್ರಕಾಶ ನಾರಾಯಣ, ಸುಖದೇವ, ದೇಶಬಂಧು ಚಿತ್ತರಂಜನ ದಾಸ್, ಲಾಲಜಪತ ರಾಯ್, ಸುಖದೇವ, ಮಂಗಲ್ ಪಾಂಡೆ, ಮೌಲನಾ ಹಸರತ್ ಮೊಹಾನಿ, ಪಂಡಿತ ಮೋತಿಲಾಲ ನೆಹರು, ರವೀಂದ್ರನಾಥ ಟ್ಯಾಗೋರ್, ಲಾಲ್ ಅವಸ್ಥಿ, ದಾದಾಭಾಯಿ ನವರೋಜಿ, ಬಿಪಿನ್ ಚಂದ್ರಪಾಲ, ಈಶ್ವರ ಚಂದ್ರ ವಿದ್ಯಾಸಾಗರ, ವಿನೋಬಾ ಭಾವೆ, ಅಲ್ಲೂರಿ ಸೀತಾರಾಮ, ಡಾ. ಬಿ.ಆರ್.ಅಂಬೇಡ್ಕರ. ಕಸ್ತೂರ ಬಾ ಗಾಂಧಿ ಗೋಪಾಲ ಕೃಷ್ಣ ಗೋಖಲೆ , ಕೆ.ಬಿ. ಹೆಡಗೆವಾರ್ ಜಗಜೀವನ ರಾಮ್ ಸೆಹಗಲ್ಎಚ್ ನರಸಿಂಹಯ್ಯ ಗೋವಿಂದ ವಲ್ಲಭ, ಪಂತ್ಪೆರಿಯಾರ್ ರಾಮಸ್ವಾಮಿ ಹಜರತ್ ಮಹಲ್ಹಿಂದೂಸ್ತಾನಿ ಲಾಲ್ ಸೇನಾ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ, ನೀಲಕಂಠ ಗೌಡ ಪ್ರಭುರಾಜ ಪಾಟೀಲ ಸ್ವಾಮಿ ರಾಮಾನಂದ ತೀರ್ಥ. ರಾಜಕಾರರಿಗೆ ಸಿಂಹ ಸ್ವಪ್ನವಾಗಿದ್ದ ನಮ್ಮ ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಹುಲಿ, ದುಮ್ಮದ್ರಿ ಯ ಸರ್ದಾರ ಶರಣಗೌಡರಂತ ಇನ್ನೂ ಹಲವಾರು ಮಹನೀಯರ ತ್ಯಾಗ ಬಲಿದಾನದ ಪ್ರತಿಫಲವಾಗಿ ಲಭಿಸಿದ ಸ್ವಾತಂತ್ಯ್ರವಿಂದು ಅಧರ್ಮಿಗಳ ಕರಗಳಲ್ಲಿ ಸಿಲುಕಿನರಳುತ್ತಿದೆ. ಮಹಾತ್ಮ ಗಾಂಧೀಜಿ ಹೇಳುತ್ತಿದ್ದರು, “ಒಂದು ಹೆಣ್ಣು ಯಾವಾಗ ನಿರ್ಭಯವಾಗಿ ಮದ್ಯರಾತ್ರಿ ತಿರುಗಾಡುತ್ತಾಳೋ ಅಂದು, ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ” ಅಂತ,ಈಗ ಮಧ್ಯರಾತ್ರಿ ಇರಲಿ, ಹಗಲಲ್ಲಿಯೇ ಅವಳಿಗೆ ಸ್ವಾತಂತ್ರ್ಯವಿಲ್ಲ, ಹಾಡು ಹಗಲಲ್ಲೇ ಅತ್ಯಾಚಾರ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿವೆ ಅಂದ್ರೆ ಇದೇನಾ ಸ್ವಾತಂತ್ರ್ಯ? ಇಡಿ ವ್ಯವಸ್ಥೆಯೇ ರಾಜಕೀಯದ ದೊಂಬರಾಟದಲ್ಲಿಯೇ ಕಾಲಹರಣವಾಗತ್ತಿದೆ. ಯಾವ ಊರಲ್ಲಿಯೂ ಸಹ ಸರಿಯಾದ ಶೌಚಾಲಯವಿಲ್ಲದೆ.ನಮ್ಮಕ್ಕ-ತಂಗಿಯರು ಸೂರ್ಯಾಸ್ತ ನಂತರ, ಇಲ್ಲ ಸೂರ್ಯೋದಯದ ಮುಂಚೆ ನಿತ್ಯ ಕರ್ಮವ ಕಳೆದುಕೊಳ್ಳುವಂತ ಪರಿಸ್ಥಿತಿಯಿದೆ, ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದೆ, ಮಕ್ಕಳು ಖಾಸಗಿ ಶಾಲೆಯ ಕದ ತಟ್ಟುವಂತಾಗಿದೆ,ದೇಶದ ಬೆನ್ನೆಲುಬಾದ ರೈತ ಬೆವರು ಸುರಿಸಿ ಬೆಳೆಗೆ, ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸಾಮಾನ್ಯ ವ್ಯಾಪಾರಿ ಸುಂಕದ ಸುಳಿಯಲ್ಲಿ ಒದ್ದಾಡುತ್ತಿದ್ದಾನೆ. ವಿದ್ಯಾವಂತರು ಕೆಲಸ ಸಿಗದೇ ಲಂಚದ ಅಟ್ಟಹಾಸಕ್ಕೆ ನಲುಗುತ್ತಿದ್ದಾರೆ, ಎಲ್ಲಿದೆ ಪ್ರಜಾಪ್ರಭುತ್ವ ( ಡೆಮಾಕ್ರಸಿ )ದುರುಳರ ಕೈಯಲ್ಲಿ ಒದ್ದಾಡುತ್ತಿದೆ.ಕಾರಣ ನಾವು ನಮ್ಮ( ಮತವೆಂಬ ಹಕ್ಕನ್ನು ) ಪ್ರಭುತ್ವವನ್ನು, ಚಿಲ್ಲರೆ ಕಾಸಿಗಾಗಿ ಮಾರಿಕೊಂಡು, ಅವರ ಮುಂದೆ ಬಿಕಾರಿಗಳಂತೆ ನಿಲ್ಲುತ್ತಿದ್ದೇವೆ. ಇನ್ನೂ ಎಲ್ಲಿಯವರೆಗೆ ಭಿಕ್ಷಾಟನೆ,,ಅಷ್ಟ ದಶಕ ಸ್ವಾತಂತ್ರೋತ್ಸವದ ಹೊಸ್ತಿಲಲ್ಲಿ ನಿಂತಿರುವ ನಾವುಗಳು ಇನ್ನಾದ್ರು ಭಿಕ್ಷೆ ಬಿಟ್ಟು ಬಿಡೋಣ.
ಅನ್ಯರ ತೆಗಳುವದನ್ನು ಬಿಟ್ಟು, ಮೊದಲು ನಾವು ಸದ್ಧರ್ಮದ ಪಥದಲ್ಲಿ ನಡೆಯೋಣ, ಸ್ವಹಿತಕ್ಕಾಗಿ, ಆಳುವವರ ದೂರವಿಡೋಣ, ದೇಶಕ್ಕಾಗಿ, ದೇಶದ ಹಿತಕ್ಕಾಗಿ, ದೇಶವಾಸಿಗಳ ಸೌಖ್ಯಕಾಗಿ ಶ್ರಮಿಸುವವರ ಪರವಾಗಿ ನಿಲ್ಲೋಣ. ತಾಯಿ ಭಾರತಾಂಬೆಗೆ ಸಂತಸ ತರೋಣ, ಸದೃಢ, ಸಮೃದ್ಧ ದೇಶವನು ಕಟ್ಟೋಣ.
ಆವಾಗ್ಲೇ ಸ್ವಾತಂತ್ರೋತ್ಸಕ್ಕೆ ನಿಜವಾದ ಅರ್ಥ ಲಭಿಸುತ್ತದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಅಂತಿಮ ಪಟ್ಟಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ಜಂಟಿ ಕೃಷಿ ನಿರ್ದೇಶಕರ ಕಚೇರಿ ಸ್ಥಳಾಂತರ
    In (ರಾಜ್ಯ ) ಜಿಲ್ಲೆ
  • ಟಿಲಿಸ್ಕೋಪ‌ ತಯಾರಿಕೆ: ಹೊನವಾಡ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಲಾಂಛನಗಳ ಪಾರುಪತ್ಯದಲ್ಲಿ ಬಳಲುವುದು ಬೇಡ
    In ಚಿಂತನ
  • ಈ ಚೆಂದದ ಹೃದಯದಲಿ ನಿನ್ನದೇನೆ ಚಟುವಟಿಕೆ
    In ವಿಶೇಷ ಲೇಖನ
  • ಎಡಿಸಿ ಭರವಸೆ: ಆಹೋರಾತ್ರಿ ಧರಣಿ ಸತ್ಯಾಗ್ರಹ ಹಿಂಪಡೆದ ಬಿಜೆಪಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.