ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಧ್ಯಾರ್ಥಿ ಜೀವನದಲ್ಲಿ ಸಾಧನೆಗೆ ಅಧ್ಯಯನ ಬಹಳ ಅವಶ್ಯಕವಾಗಿದೆ. ಗ್ರಂಥಾಲಯದಲ್ಲಿ ಕನಿಷ್ಠ ೬ಘಂಟೆಗಳ ಕಾಲ ವಿಧ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಗ್ರಂಥಪಾಲಕ ಸತೀಶ ಬಿರಾದಾರ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ.ಎಸ್.ಆರ್.ರಂಗನಾಥರವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರ ಭಾವಚತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಂದು ಭಾರತದ ಗ್ರಂಥಾಲಯ, ವಿಜ್ಞಾನದ ಜನಕ ಡಾ.ಎಸ್.ಆರ್.ರಂಗನಾಥನ್ ಅವರ ಅಪ್ರತಿಮ ಕೊಡುಗೆಗಳನ್ನು ಸ್ಮರಿಸುತ್ತೇವೆ. ಗ್ರಂಥಾಲಯದ ಉಪಯೋಗ, ಗ್ರಂಥಾಲಯ ಹೇಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಹೇಗೆ ಸದುಪಯೋಗ ಮಾಡಿಕೊಳ್ಳಬೇಕು.ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ಪುಸ್ತಕ, ದಿನಪತ್ರಿಕೆಗಳು ಅಧ್ಯಯನ ಮಾಡಬೇಕೆಂದರು.
ಈ ವೇಳೆ ಪ್ರಾಚಾರ್ಯ ಬಿ.ಡಿ.ಮಾಸ್ತಿ ಡಾ.ಅಂಬರೀಶ ಬಿರಾದಾರ, ರಾಹುಲ ಕಾಂಬಳೆ, ಡಾ.ಅರವಿಂದ ಮನಗೂಳಿ, ಎಸ್.ಎಮ್.ಬಿರಾದಾರ, ಎಸ್.ಕೆ.ಹೂಗಾರ, ಅಮಿತ ಈಳಗೇರ ಡಾ.ಚಂದ್ರಕಾAತ ಪಾಟೀಲ, ವಿ.ಬಿ.ಪಾಟೀಲ, ಎಸ್.ಎಮ್.ಅರ್ಜುಣಗಿ ಸೇರಿದಂತೆ ಅನೇಕರಿದ್ದರು.