ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨೨೦/೧೧೦/೧೧ಕೆವ್ಹಿ ಆಹೇರಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಆ.೧೪ ಹಾಗೂ ಆ.೧೭ರಂದು ಬೆಳಿಗ್ಗೆ ೯ಗಂಟೆಯಿಂದ ಸಾಯಂಕಾಲ ೬ಗಂಟೆಯವರೆಗೆ ೧೦೦ಎಮ್.ವ್ಹಿ.ಎ ಪರಿವರ್ತಕ-೨ರ ಆಯಿಲ್ ಪಿಲ್ಟೆಷನ್ ಕಾರ್ಯ ನಿರ್ವಹಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ೨೨೦ಕವ್ಹಿ ಆಹೇರಿ ಮೇಲೆ ಬರುವ ೧೧೦/೧೧ಕೆವ್ಹಿ ಸಿಂದಗಿ, ಮೋರಟಗಿ, ಚಾಂದಕವಟೆ, ದೇವಣಗಾಂವ, ಮಲಘಾಣ ಹಾಗೂ ೩೩/೧೧ಕೆವ್ಹಿ ಗೋಲಗೇರಿ ವಿದ್ಯುತ್ ಉಪ-ಕೇಂದ್ರಗಳಿಂದ ಹೊರ ಹೋಗುವ ಮಾರ್ಗಗಳಿಗೆ ದಿನಾಲೂ ೩-೪ಗಂಟೆ ವಿದ್ಯುತ್ ವ್ಯತ್ಯಯ ಉಂಟಾಗುವುದು. ಮೇಲೆ ತಿಳಿಸಿರುವ ೧೧/೩೩ ಕೆವ್ಹಿ ಉಪಕೇಂದ್ರಗಳಿಂದ ಹೊರ ಹೋಗುವ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯೆಯವಾಗುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.