ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಜಗದಾಳ ಗ್ರಾಮದ ಕಾಂಗ್ರೆಸ್ ಮುಖಂಡರಾದ ಪಂಡಿತ ಭೋಸಲೆಯವರು ತಮ್ಮ ಜನ್ಮದಿನಾಚರಣೆ ನಿಮಿತ್ತ ಚಿಮ್ಮಡ, ಜಗದಾಳ, ಆಸಂಗಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿನೀಡಿ ಗಾಲಿಖುರ್ಚಿ ಹಾಗೂ ಬಡ ಬಾನಂತಿಯರಿಗೆ ಆರೋಗ್ಯ ಕಿಟ್ ವಿತರಿಸಿದರು.
ಜನ್ಮದಿನಾಚರಣೆಯ ನಿಮಿತ್ತ ಮಂಗಳವಾರ ಮುಂಜಾನೆ ಸ್ಥಳಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ. ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿದ್ದ ಗಾಲಿಖುರ್ಚಿಯನ್ನು ವೈದ್ಯಾಧಿಕಾರಿ ಡಾ. ಅಶೋಕ ಪಡಸಾಲಿ, ಡಾ. ಕೆ,ಎಸ್, ತಳ್ಳಿಯವರಿಗೆ ಹಸ್ತಾಂತರಿಸಿದರು. ನಂತರ ಗ್ರಾಮದ ಬಡ ಬಾನಂತಿಯರಿಗೆ ಆರೋಗ್ಯ ಕಿಟ್ ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಗ್ರಾಮದ ಕಾಂಗ್ರೆಸ್ ಮುಖಂಡರಾದ ಮಹಾಲಿಂಗ ಮಾಯನ್ನವರ, ಸಲೀಮ ಸರಕಾವಸ, ಇಮಾಮ ಯಾದವಾಡರವರು ಪಂಡಿತ ಭೋಸಲೆಯವರನ್ನು ಸತ್ಕರಿಸುವ ಮೂಲಕ ಶುಭಾಶಯ ಕೋರಿದರು ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಅಡಿವೆಪ್ಪ ಪಾಟೀಲ, ಎಪಿಎಂಸಿ ಸದಸ್ಯ ಚಂದ್ರಶೇಖರ ಕುರಿ, ಜಗದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ ಅಸ್ಕಿ, ರವಿಂದ್ರ ಗೊಬ್ಬಾಣಿ, ಸದಾಶಿವ ದಡ್ಡಿಮನಿ, ಕೆ.ಎಂ.ಎಫ್ ಅಧ್ಯಕ್ಷ ಶ್ರೀಶೈಲ ಪಾಟೀಲ, ಉಪಾಧ್ಯಕ್ಷ ದಾನಯ್ಯ ಮಠದ, ಕಾಶಪ್ಪ ಕಬಾಡಗಿ, ಮಹದೇವ ತೇರದಾಳ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.