ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಅಪ್ರಾಪ್ತನಿಗೆ ದ್ವಿಚಕ್ರ ವಾಹನ ಓಡಿಸಲು ಕೊಟ್ಟಿದ್ದಕ್ಕೆ ಅಫಜಲಪುರ ಠಾಣೆ ಪೊಲೀಸ್‌ರು ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಈ ಪ್ರಕರಣದ ತೀರ್ಪು ನೀಡಿರುವ ನ್ಯಾಯಾಧೀಶರು ವಾಹನದ ಮಾಲೀಕನಿಗೆ ೨೬ ಸಾವಿರ ದಂಡ ವಿಧಿಸಿದ ಘಟನೆ ಅಫಜಲಪುರದಲ್ಲಿ ನಡೆದಿದೆ.
ವಾಹನ ಮಾಲೀಕರ ಗುರುಲಿಂಗಪ್ಪ ಮಲ್ಲಪ್ಪ ಜಂಬಗಿ(೪೫) ಎನ್ನುವವರು ೧೮ ವರ್ಷದೊಳಗಿನ ಅಪ್ರಾಪ್ತನಿಗೆ ದ್ವಿಚಕ್ರ ವಾಹನ ಓಡಿಸಲು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು.
ಅಫಜಲಪುರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ವಾಹನ ಮಾಲೀಕನಿಗೆ ೨೬ ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.