ಗುತ್ತೇದಾರ ನೇತೃತ್ವದಲ್ಲಿ ನೂರಾರು ಜನ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಮಾಲೀಕಯ್ಯ ಗುತ್ತೇದಾರ ನೇತೃತ್ವದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಜಮೀಲ್ ಗೌಂಡಿ ಹಾಗೂ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪೂರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಪಕ್ಷ ಸೇರ್ಪಡೆಯ ಬಳಿಕ ಜಮೀಲ್ ಗೌಂಡಿ ಮಾತನಾಡಿ ಜೆಡಿಎಸ್ ಪಕ್ಷ ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟ ಪಕ್ಷವೆಂದು ಭಾವಿಸಿ ನಾವು ಸಾಕಷ್ಟು ಪಕ್ಷಕ್ಕಾಗಿ ದುಡಿದಿದ್ದೇವೆ. ಪಕ್ಷವನ್ನು ತಾಲೂಕಿನಲ್ಲಿ ಬಲಪಡಿಸಲು ಶ್ರಮಿಸಿದ್ದೇವೆ. ಆದರೆ ಪಕ್ಷದ ವರೀಷ್ಠರು ಇಂದು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿದ್ದರಿಂದ ಬೇಸರಗೊಂಡು ಜಾತ್ಯಾತೀತ ತತ್ವದ ಮೇಲೆ ನಿಂತಿರುವ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ನೇತೃತ್ವದಲ್ಲಿ ನೂರಾರು ಬೆಂಬಲಿಗರೊಂದಿಗೆ ಸೇರ್ಪಡೆಗೊಂಡಿದ್ದೇವೆ. ಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ದುಡಿಯಲಿದ್ದೇವೆ ಎಂದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ ಕಾಂಗ್ರೆಸ್ ಪಕ್ಷ ದೇಶದ ಪುರಾತನ ಮತ್ತು ದೊಡ್ಡ ಪಕ್ಷವಾಗಿದೆ. ಜೆಡಿಎಸ್ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಪಕ್ಷವನ್ನು ಸಂಘಟಿಸುವ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅರವಿಂದ ಗುತ್ತೇದಾರ, ನಬೀಲಾಲ್ ಮಾಶಾಳಕರ, ಜಾಫರ ಬಡದಾಳ, ರಶೀದಸಾಬ್ ಮನಿಯಾರ, ಇಬ್ರಾಹಿಂ ಜಮಾದಾರ, ಮನ್ಸೂರ್ ಪಟೇಲ್, ಮಂಜೂರ್ ಅಗರಖೇಡ, ಮೈನೂದ್ದೀನ್, ಇಲಾಹಿ ಪಟೇಲ್, ಅಮೀರ್ ಖಾನ್ ಬಿದನೂರ, ಮಹೇಶ ಮುತ್ಯಾ, ಶಿವಪುತ್ರಪ್ಪ ಹೊಸಮನಿ, ರಹಿಂಸಾಬ್ ಶಾಬಾದ್, ಜೀಲಾಲ್‌ಸಾಬ್ ಕೋಬಾಳೆ, ಕಾಸಿಂಸಾಬ್ ಕೋಬಾಳೆ, ರಹಿಂ ಪಟೇಲ್, ಇಮಾಮಸಾಬ್ ಶೇಕ್, ಚಾಂದ ಅರ್ಜುಣಗಿ ಸೇರಿದಂತೆ ಅನೇಕರು ಇದ್ದರು.