ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಶುಕ್ರವಾರ ರಾತ್ರಿಯಿಂದ ಶುರುವಾದ ಮಳೆ ಶನಿವಾರ ಬೆಳಿಗ್ಗೆ, ರಾತ್ರಿಯೂ ಸುರಿದ ಪರಿಣಾಮ ಅಫಜಲಪುರ ತಾಲೂಕಿನ ಸಿಧನೂರ, ಭೈರಾಮಡಗಿ, ವಡ್ಡಳ್ಳಿ ತಾಂಡಾ ಸೇರಿದಂತೆ ಹಲವೆಡೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿಕೊಂಡ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ವಡ್ಡಳ್ಳಿ ತಾಂಡಾದ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕಿರು ಸೇತುವೆ ಮಳೆ ನೀರಲ್ಲಿ ಮುಳುಗಡೆಯಾದ ಪರಿಣಾಮ ಶಾಲಾ ಮಕ್ಕಳು, ರೈತರು, ಸಾರ್ವಜನಿಕರು ಹಳ್ಳ ದಾಟಲಾಗದೆ ಮೂರು ಗಂಟೆ ಕಾದು ನಿಲ್ಲುವಂತಾಯಿತು. ನೀರಿನ ಹರಿವು ಕಡಿಮೆಯಾದ ಬಳಿಕ ಹಳ್ಳ ದಾಟಿ ಮನೆ ಸೇರುವಂತಾಯಿತು. ಶಾಲಾ ಮಕ್ಕಳನ್ನು ಟ್ರ್ಯಾಕ್ಟರ್ ಸಹಾಯದಿಂದ ಹಳ್ಳ ದಾಟಿಸಿದ ಘಟನೆ ನಡೆಯಿತು. ಅಲ್ಲದೆ ಸಿಧನುರ ರೇವೂರ(ಬಿ) ರಸ್ತೆ ಸಂಪರ್ಕ ಕಡಿತಗೊಂಡು ಸಮಸ್ಯೆ ಉಂಟಾಯಿತು. ಹೊಲಗದ್ದೆಗಳಿಗೆ ಹೋಗಿದ್ದ ರೈತರು, ಶಾಲಾ ಕಾಲೇಜುಗಳಿಗೆ ಹೋಗಿದ್ದ ವಿದ್ಯಾರ್ಥಿಗಳು ಮಳೆಯಿಂದಾಗಿ ಹಳ್ಳ ದಾಟಲಾಗದೆ ಪರದಾಟ ನಡೆಸಿ ಮನೆ ಸೇರುವಂತಾಯಿತು. ಇಷ್ಟೇ ಅಲ್ಲದೆ ಅನೇಕ ಕಡೆಗಳಲ್ಲಿ ಹೊಲಗದ್ದೆಗಳಲ್ಲಿ ನೀರು ನಿಂತಿದ್ದರಿAದ ವಾಣಿಜ್ಯ ಬೆಳೆಗಳಿಗೆ ಅನುಕೂಲವಾದರೆ ತಗ್ಗು ಪ್ರದೇಶದ ಹೊಲಗದ್ದೆಗಳಲ್ಲಿ ಬೆಳೆ ಹಾಳಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.