ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೧೦/೧೧ ಕೆವಿ ಝಳಕಿಯಿಂದ ಹೊರಡುವ ೩೩/೧೧ ಕೆವಿ ನಿವರಗಿ ವಿದ್ಯುತ್ ವಿತರಣಾ ಕೇಂದ್ರದ ಶಕ್ತಿ ಪರಿವರ್ತಕದ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲಿ ದಿನಾಂಕ:೧೫-೧೧-೨೦೨೪ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
