ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ತಾಲ್ಲೂಕಿನ ಕನಮುಚನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಶಾಲಾ ಶಿಕ್ಷಣ ಇಲಾಖೆಯ ಸಹನಿರ್ದೇಶಕಿ ಮತ್ತು ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಜಮಖಂಡಿಯ ಪ್ರಾಚಾರ್ಯ ಮಂಗಲಾ ನಾಯಕ ಗುರುವಾರ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿದರು.
ಶಾಲಾ ಆವರಣದಲ್ಲಿ ವಿಧ್ಯಾರ್ಥಿಗಳು ಗುಂಪು ಅಧ್ಯಯನ ಮಾಡುತ್ತಿರುವದನ್ನು ವೀಕ್ಷಣೆ ಮಾಡಿದರು. ಶಾಲಾ ಸಿಬ್ಬಂದಿ ವರ್ಗದವರಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಸಲಹೆ ಸೂಚನೆ ನೀಡಿ ಮಾರ್ಗದರ್ಶನ ಮಾಡಿದರು. ಶಾಲಾ ಪರಿಸರ ಕಂಡು ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಉಪನ್ಯಾಸಕಿ ಎ. ಕೆ. ಕೋರಿಗೇರಿ, ಮಹೇಶ ಜೋಶಿ, ಜತ್ತಿ, ಮುಖ್ಯ ಶಿಕ್ಷಕ ಆರ್.ವಿ.ಹೊಸೂರ ಹಾಗೂ ಶಾಲಾ ಸಿಬ್ಬಂದಿ ಇದ್ದರು.

