ಬಸವನಬಾಗೇವಾಡಿ: ಪಟ್ಟಣದ ಗಣಪತಿ ವೃತ್ತದಲ್ಲಿ ಆರೋಗ್ಯ ಇಲಾಖೆಯಿಂದ ಶನಿವಾರ ವಿಶ್ವ ತಂಬಾಕು ಮುಕ್ತ ದಿನಾಚರಣೆಯಂಗವಾಗಿ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಲಾಯಿತು. ನಂತರ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮ ಜರುಗಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಮಹಾದೇವಿ ಬೇವನೂರ ಮಾತನಾಡಿ, ತಂಬಾಕು ಸೇವನೆಯಿಂದ ಜಗತ್ತಿನಲ್ಲಿ ವರ್ಷಕ್ಕೆ ಎಂಟು ದಶಲಕ್ಷದಷ್ಟು ಜನರು ಬಲಿಯಾಗುತ್ತಿದ್ದಾರೆ. ಸಿಗರೇಟು, ಬೀಡಿ ಸೇರಿದಂತೆ ತಂಬಾಕು ಜಗಿಯುವದರಿಂದ ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಅಂತಹ ರೋಗಗಳಿಗೆ ಜನರು ತುತ್ತಾಗಬೇಕಾಗುತ್ತದೆ. ಮಹಿಳೆಯರು ತಂಬಾಕು ತಿನ್ನುವದರಿಂದ ಕಡಿಮೆ ತೂಕದ ಮಕ್ಕಳು ಹುಟ್ಟುತ್ತಾರೆ. ಮಗುವಿನಲ್ಲಿ ದೈಹಿಕ ಮಾನಸಿಕ ವೈಫಲ್ಯತೆಗಳು ಕಂಡುಬರುತ್ತವೆ. ಗರ್ಭೀಣಿಯರಲ್ಲಿ ಗರ್ಭಪಾತ ಸಂಭವಿಸುವ ಲಕ್ಷಣಗಳು ಸಾಧ್ಯತೆಯಿದೆ. ಯಾರೇ ಆಗಲಿ ತಂಬಾಕು ತಿನ್ನಬಾರದು. ಇದನ್ನು ತ್ಯಜಿಸುವುದು ತುಂಬಾ ಅಗತ್ಯವಿದೆ. ಆರೋಗ್ಯ ವರ್ಧಕ ಹಣ್ಣು-ಹಂಪಲಗಳನ್ನು ತಿನ್ನುವದು ಉತ್ತಮ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಶೋಕ ಗುಳೇದ, ಶಾಂತಪ್ಪ ಪಡಶೆಟ್ಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಶ್ರೀಶೈಲ ಜಾಡರ, ಮಲಕಾಜಪ್ಪ ಸೂರುಗೋಳಿ, ಶ್ರೀಶೈಲ ಶಿರಗುಪ್ಪಿ, ಭಾಗವ್ವ ಹಂಜಗಿ, ಗಂಗಾಬಾಯಿ ನಾಗೂರ, ವನಿತಾ ಬಾಗೇವಾಡಿ, ಲಕ್ಷ್ಮೀಬಾಯಿ ಹಡಪದ, ಶರಣವ್ವ ಹಡಪದ, ಆಶಾ ಕಾರ್ಯಕರ್ತೆ ರೇಣುಕಾ ಅಲ್ಲೋಳ್ಲಿ, ಎನ್ಸಿಡಿ ಆಪ್ತ ಸಮಾಲೋಚಕಿ ರಾಜಶ್ರೀ ಕಂಬೋಗಿ, ಎನ್ಸಿಡಿ ನರ್ಸೀಂಗ ಆಫೀಸರ್ ಸಂಗಮೇಶ ಮುಳಸಾವಳಗಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

