ದೇವರಹಿಪ್ಪರಗಿ: ಮಕ್ಕಳ ಬಾಳಿಗೆ ಬೆಳಕಾಗಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ, ಈಗ ಸೇವೆಯಿಂದ ನಿವೃತ್ತರಾಗುತ್ತಿರುವ ಶಿಕ್ಷಕರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಯಲಗೋಡ ವಲಯದ ಸಿಆರ್‌ಪಿ ವೀರಭದ್ರಯ್ಯ ಕರಕಳ್ಳಿಮಠ ಹೇಳಿದರು.
ತಾಲ್ಲೂಕಿನ ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸೇವಾ ನಿವೃತರಾದ ಉರ್ದು, ವೆಂಕಟೇಶ್ವರ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಿ, ಶುಭಕೋರಿ ಮಾತನಾಡಿದರು. ನಿವೃತ್ತರು ತಮ್ಮ ಅತ್ಯಮೂಲ್ಯ ಅನುಭವ, ಮಾರ್ಗದರ್ಶನವನ್ನು ಶಿಕ್ಷಣ ಇಲಾಖೆ ಹಾಗೂ ಸಮಾಜಕ್ಕೆ ನೀಡುವುದರ ಮೂಲಕ ವಿಶ್ರಾಂತ ಜೀವನ ಆನಂದಿಸಲಿ ಎಂದರು.
ಸೇವಾನಿವೃತ್ತರಾದ ಯಲಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎ.ಎಚ್.ಮುಲ್ಲಾ, ಸಹಶಿಕ್ಷಕ ಎನ್.ಎಸ್.ಲಮಾಣಿ, ವೆಂಕಟೇಶ್ವರ ಪ್ರೌಢಶಾಲೆಯ ಸಿ.ಬಿ.ಬೂದಿಹಾಳ, ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರು ಎಸ್.ಎಮ್.ಗುಬ್ಬೇವಾಡ ಅವರನ್ನು ಎಸ್‌ಡಿಎಮ್‌ಸಿ ಹಾಗೂ ಶಿಕ್ಷಕರ ಬಳಗದಿಂದ ಸನ್ಮಾನಿಸಲಾಯಿತು.
ಎಸ್‌ಡಿಎಮ್‌ಸಿ ಅಧ್ಯಕ್ಷ ಮಹಾಂತೇಶ ಕೂಟನೂರ, ಶಿಕ್ಷಕರಾದ ಸಿ.ಜಿ.ಕಾಂಬಳೆ, ಎ.ಎ.ಕುರಿ, ಸುರೇಶ ಬಡಿಗೇರ, ಮಲ್ಲಿಕಾರ್ಜುನ ಅಂಕಲಗಿ, ರಾಘವೇಂದ್ರ ಉಂಡಿಗೇರ, ದಸ್ತಗೀರಸಾಬ್ ಬಗಲಿ, ವಿದ್ಯಾವತಿ ಹನುಮರೆಡ್ಡಿ, ಮಂಗಳಾಬಾಯಿ ಅಲ್ಮದ ಸೇರಿದಂತೆ ಬಿಸಿಯೂಟ ಸಿಬ್ಬಂದಿ, ಮಕ್ಕಳು, ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

