ಮುದ್ದೇಬಿಹಾಳ: ಬಿಸಿಲಿನ ಧಗೆಗೆ ಬೇಸತ್ತ ಪಟ್ಟಣದ ಜನತೆಗೆ ರವಿವಾರ ಮಳೆರಾಯ ಕೊಂಚ ನೆಮ್ಮದಿ ನೀಡಿದ್ದಾನೆ. ಸುಮಾರು ಒಂದು ತಾಸು ಸಿಡಿಲು, ಗುಡುಗು ಸಮೇತ ಬಿಡದೇ ಸುರಿದ ಮಳೆ ಒಂದೆಡೆ ಭೂಮಿಯನ್ನು ತಂಪು ಮಾಡಿದರೆ, ಇನ್ನೊಂದೆಡೆ ಮಾರುತಿ ನಗರದ ಮುಖ್ಯ ಚರಂಡಿಯಲ್ಲಿದ್ದ ಹೊಲಸೆಲ್ಲ ರಸ್ತೆಯ ಮೇಲೆ ಬಂದು ಗಬ್ಬು ವಾಸನೆ, ತಿರುಗಾಡಲು ಸಾಧ್ಯವಾಗದೇ ಸಾರ್ವಜನಿಕರು ಪರದಾಡಿದ ಘಟನೆಯೂ ನಡೆಯಿತು.
ಕಾಲ ಕಾಲಕ್ಕೆ ಚರಂಡಿಯಲ್ಲಿನ ಹೊಲಸು ಸ್ವಚ್ಛಗೊಳಿಸದ ಪರಿಣಾಮ ಮಳೆಯಾದರೆ ಸಾಕು ಎಲ್ಲ ಕಸ ಆಚೆ ಬಂದು ರಸ್ತೆಯಲ್ಲಿ ನಿಂತು ಜನತೆಗೆ ತೊಂದರೆ ಮಾಡಿದೆ ಎಂದು ಕೆಲ ಸಾರ್ವಜನಿಕರು ಪುರಸಭೆಯ ಮೇಲೆ ಹರಿಹಾಯ್ದರೆ, ಬಿಜೆಪಿ ಮುಖಂಡ ಸಿದ್ಧರಾಜ ಹೊಳಿ ತಮ್ಮ ಮನೆ ಎದುರು ತಿರುಗಾಡಲು ಬಾರದಷ್ಟು ನೀರು ನಿಂತಿದ್ದು ಇದಕ್ಕೆ ನಿಯಮ ಬಾಹಿರ ಯುಜಿಡಿ ಕಾಮಗಾರಿ ಮತ್ತು ಸುಮಾರು ವರ್ಷಗಳಿಂದ ಮನೆ ಕಟ್ಟದೇ ಖಾಲಿ ಇರುವ ಪ್ಲಾಟ್‌ಗಳು ಕಾರಣ ಎಂದು ಆರೋಪಿಸಿದರು. ಕೂಡಲೇ ಮನೆ ಕಟ್ಟದೇ ಖಾಲಿ ಬಿಟ್ಟಿರುವ ಪ್ಲಾಟ್ ನ ಮಾಲೀಕರಿಗೆ ಪುರಸಭೆ ನಿಯಮಾವಳಿಗಳ ಪ್ರಕಾರ ದಂಡ ವಿಧಿಸಿ, ನೀರು ನಿಲ್ಲದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

