ಕೆಂಭಾವಿ ವಾರ್ಡ್ ನಂಬರ್ 13ರಲ್ಲಿ ನೀರಿನ ಸಮಸ್ಯೆ | ಸ್ಪಂದಿಸದ ಅಧಿಕಾರಿಗಳು
ಸುರಪುರ: ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ನಿತ್ಯ ಅಲೆದಾಡುವ ಪರಿಸ್ಥಿತಿರೊದಗಿದ್ದು, ವಾರ್ಡ್ ನಂಬರ್ 13 ಕುಂಬಾರ ಓಣಿಯ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ.
ಈ ಕುರಿತು ಅದೆಷ್ಟೋ ಬಾರಿ ಮುಖ್ಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸಾರ್ವಜನಿಕರಿಗೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಮಾಡಿಸೋಣ, ಮಾಡುತ್ತೇವೆ ಎಂದು ಹೇಳಿ ಕಳಿಸಿಕೊಡುತ್ತಾರೆ ಮತ್ತು ಹೇಳಿದ್ದೇವೆ ಮಾಡ್ತಾರೆ ಅಂತ ಹೇಳಿ ಇಲ್ಲ ಸಲ್ಲದ ನೆಪ ಹೇಳಿ ಕಳಿಸುತ್ತಾರೆ ಎಂಬುದು ನಾಗರಿಕರ ದೂರು.
ಕುಂಬಾರ್ ಓಣಿ ಸಾರ್ವಜನಿಕರು ಫೋನ್ ಮಾಡಿದರೂ ಕೂಡ ಫೋನ್ ರಿಸೀವ್ ಮಾಡದ ಮುಖ್ಯ ಅಧಿಕಾರಿ ಸಾರ್ವಜನಿಕರು ಈ ರೀತಿಯಾಗಿ ಸಮಸ್ಯೆ ತೋಡಿಕೊಂಡರೂ ಅದಕ್ಕೂ ತಮಗೂ ಸಂಬಂಧವೇ ಇಲ್ಲದೆ ಇರೋ ತರ ವರ್ತಿಸುತ್ತಾರೆ ಎಂದು ಮುಖ್ಯಾಧಿಕಾರಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಬೋರ್ವೆಲ್ ರಿಪೇರಿಗಾಗಿ ಇದನ್ನು ಸರಿ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಮುಂದೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ವಾರ್ಡಿನ ಜನರು ಎಚ್ಚರಿಕೆ ನೀಡಿರುತ್ತಾರೆ.

