Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪಡಗಾನೂರಿನ ’ನಮ್ಮ ಮಕ್ಕಳ ಧಾಮ’ ನವೀಕರಿಸಲು ಆಗ್ರಹ
(ರಾಜ್ಯ ) ಜಿಲ್ಲೆ

ಪಡಗಾನೂರಿನ ’ನಮ್ಮ ಮಕ್ಕಳ ಧಾಮ’ ನವೀಕರಿಸಲು ಆಗ್ರಹ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಪಡಗಾನೂರಿನ ನಮ್ಮ ಮಕ್ಕಳ ಧಾಮವನ್ನು ಬಾಲ ನ್ಯಾಯ ಕಾಯಿದೆ ಅಡಿಯಲ್ಲಿ ನೋಂದಣಿ ನವೀಕರಿಸಲು ಸಾರ್ವಜನಿಕರ ಪರವಾಗಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮುಖಂಡರು ಮಾತನಾಡಿ, ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ಹದ್ದಿಯಲ್ಲಿ ಬರುವ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಡಿಯಲ್ಲಿ ನಮ್ಮ ಮಕ್ಕಳ ಧಾಮ ಎಂಬ ಹೆಸರಿನ ಮಕ್ಕಳ ಮನರ್ವಸತಿ ಕೇಂದ್ರವನ್ನು ೧೬ ವರ್ಷಗಳಿಂದ ನಡೆಸಲಾಗುತ್ತಿದೆ. ಈ ಧಾಮವು ಸರ್ಕಾರದ ಯಾವುದೇ ಅನುದಾನ ಪಡೆಯದೇ ಸಮುದಾಯದ ನಾಯಕತ್ವದಲ್ಲಿ ನಮ್ಮಂತಹ ಮಹಾ ದಾನಿಗಳ ಮೂಲಕವೇ ನಡೆಯುತ್ತಿದೆ. ನಾವು ಕಂಡಿರುವಂತೆ ಸದರಿ ಧಾಮವು ಮಕ್ಕಳ ಸ್ನೇಹಿ ವಾತಾವರಣ ಹೊಂದಿದ್ದು, ಮಕ್ಕಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಲಭ್ಯ ಇವೆ.
ಸಧ್ಯ ನಮ್ಮ ಮಕ್ಕಳ ಧಾಮದ ನೋಂದಣಿ ನವೀಕರಿಸಬೇಕಾಗಿದ್ದು , ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಯವರು ದಿನಾಂಕ : ೨೭/೦೩/೨೦೨೪ ಮತ್ತು ೧೮/೦೪/೨೦೨೪ ರಂದು ಎರಡು ಬಾರಿ ತಮಗೆ ಪತ್ರ ನೀಡಿದರೂ ಸಹ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ನಿರ್ಲಕ್ಷತನ, ನಿಷ್ಕಾಳಜಿತನ ಹಾಗೂ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸದ್ಯ ನಮ್ಮ ಮಕ್ಕಳ ಧಾಮದ ನೋಂದಣಿ ರದ್ದು ಮಾಡುವುದಾಗಿ ವದಂತಿಗಳು ಹರಡುತ್ತಿವೆ. ಇದಕ್ಕೆ ತಾವು ಆಸ್ಪದ ನೀಡಬಾರದು. ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳ ಆಶ್ರಯ ತಾಣವಾಗಿರುವ ನಮ್ಮ ಮಕ್ಕಳ ಧಾಮದ ನೋಂದಣಿ ಒಂದು ವೇಳೆ ರದ್ದಾದರೆ , ಮಕ್ಕಳ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿ, ಅನುಭವ ಹೊಂದಿದ ಸಂಸ್ಥೆಯನ್ನು ನಮ್ಮ ಕೈಯಾರೆ ಕೊಲೆ ಮಾಡಿದಂತಾಗುತ್ತದೆ. ಹಾಗೂ ಮಕ್ಕಳಿಗೆ ದೊರೆಯಬೇಕಾದ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ.
ಜಿಲ್ಲಾ ತನಿಖಾ ತಂಡವು ನಮ್ಮ ಮಕ್ಕಳ ಧಾಮಕ್ಕೆ ಭೇಟಿ ನೀಡಿದಾಗ, ತಂಡದ ಎಲ್ಲಾ ಸದಸ್ಯರು ಸಕಾರಾತ್ಮಕ ವರದಿ ನೀಡಿದ್ದಾರೆ. ಅದರಲ್ಲಿನ ಪೀಟರ್ ಅಲೆಝಾಂಡರ್ ಎಂಬುವವರು ಮಾತ್ರ ಪೂರ್ವಾಗ್ರಹ ಪೀಡಿತರಾಗಿ ಕೇವಲ ಸಣ್ಣಪುಟ್ಟ ನಕಾರಾತ್ಮಕ ಅಂಶಗಳನ್ನೇ ವರದಿ ಮಾಡುತ್ತಿದ್ದಾರೆ. ಸರ್ಕಾರದಿಂದ ಧನ ಸಹಾಯ ಪಡೆದುಕೊಂಡು ನಡೆಯುತ್ತಿರುವ ಹೆಚ್ಚಿನ ಹಾಸ್ಟೆಲ್‌ಗಳಲ್ಲಿ ಸೌಲಭ್ಯಗಳ ಕೊರತೆ ಇರುವುದು ನಾವು ದಿನಾಲೂ ದಿನಪತ್ರಿಕೆಗಳಲ್ಲಿ ಓದುತ್ತಿದ್ದೇವೆ ಹಾಗೂ ಕಣ್ಣಾರೆ ಕಂಡಿದ್ದೇವೆ. ಅಂತಹದರಲ್ಲಿ ಯಾವ ಕುಂದುಕೊರತೆಗಳು ಇಲ್ಲದಂತೆ ನಮ್ಮಂತಹ ದಾನಿಗಳ ಮೂಲಕವೇ ಮುನ್ನಡೆಸುತ್ತಿರುವ ಹಾಗೂ ಬೆರಳೆಣಿಕಷ್ಟೆ ನೋಡಲು ಸಿಗುವ ಇಂತಹ ಪ್ರಾಮಾಣಿಕ ಮತ್ತು ಪಾರದರ್ಶಕ ಕೇಂದ್ರಕ್ಕೆ ಮೇಲಿಂದ ಮೇಲೆ ಸಮಸ್ಯೆ ಒಡ್ಡುತ್ತಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡಿದಂತೆ ಅಲ್ಲವೆ ?.
ಕಾರಣ ಜಿಲ್ಲೆಯ ದಂಡಾಧಿಕಾರಿಗಳಾದ ತಾವು ಸ್ವತಃ ಒಮ್ಮೆ ಸದರಿ ಕೇಂದ್ರಕ್ಕೆ ಭೇಟಿ ನೀಡಿ ಪರಶೀಲಿಸಿರಿ, ಭೇಟಿಯ ಸಂದರ್ಭದಲ್ಲಿ ನ್ಯೂನ್ಯತೆಗಳು ಕಂಡು ಬಂದಲ್ಲಿ ತಮ್ಮ ಮಾರ್ಗದರ್ಶನದಂತೆ ಸರಿಪಡಿಸಿಕೊಂಡು ಮುಂದುವರೆಯುತ್ತೇವೆ. ಆದ್ದರಿಂದ ನೋಂದಣಿ ನವೀಕರಣಕ್ಕೆ ಕ್ರಮ ವಹಿಸಬೇಕೆಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ನವೀಕರಣಕ್ಕೆ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಶಿಪತಿ ಕುದರಿ, ಹೀರಾಚಂದ ಎಸ್. ಗಾಂಧಿ, ಆನಂದ ಕುಲಕರ್ಣಿ, ಶ್ರೀಶೈಲ ಮುಳಜಿ, ಶ್ರೀಇಕಾಂತ ಬ. ರಡ್ಡಿ, ಚನ್ನಬಸಪ್ಪ ಜೋಗೂರ, ಸುನೀಲ ಲ. ಚಾಕರೆ, ಬಸವರಾಜ ಶಿ. ಗಿಡ್ನವರ, ಶಶಿಕಲಾ ಎ. ಜಾಬೇನವರ, ಅಪ್ಪು ಸಿದ್ದಪ್ಪ ದೊಡ್ಡಮನಿ, ಕಲ್ಲಪ್ಪ ಶಿವಾನಂದ ನಂದರಗಿ, ಸಂಜು ಯ. ಇರಕಲ್, ಬಸವರಾಜ ತಾಳಿಕೋಟಿ, ನವೀನ ಶಿ. ಮಲಘಾಣದಿನಿ, ಇನ್ನಿತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.