ಮುದ್ದೇಬಿಹಾಳ: ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನೋರ್ವ ತನ್ನ ಕಾರನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಸದ್ದು ಮಾಡಿದೆ.
ಶಾಸಕರ ಮಾದರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಈ ಆರೋಪ ಹೊತ್ತಿದ್ದಾರೆ. ತಮ್ಮ ನಾಲ್ಕು ಚಕ್ರದ ವಾಹನವನ್ನು ಇಬ್ಬರು ವಿದ್ಯಾರ್ಥಿಗಳ ಕಡೆಯಿಂದ ಸ್ವಚ್ಛಗೊಳಿಸಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾಲಾ ಆವರಣದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು ನೀರಿನ ಪೈಪ್ ಹಿಡಿದು ಕಾರು ತೊಳೆಯುತ್ತಿರುವ ಮತ್ತು ಟವಲ್ ನಿಂದ ಕಾರನ್ನು ಉಜ್ಜುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿ ಮುಖ್ಯ ಶಿಕ್ಷಕನ ಮೇಲಿರುವ ಆರೋಪಕ್ಕೆ ಸಾಕ್ಷಿಯಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

