ವಿಜಯಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ ) ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಕೊಳಚೆ ನಿರ್ಮೂಲನೆ ಆಡಳಿತ ಅಧಿಕಾರಿ ಹೊಸಲಟ್ಟಿಯವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿ ನಡೆಸಿದ ಆಮರಣ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
ಈ ವೇಳೆ ದಸಂಸ ( ಅಂಬೇಡ್ಕರ್ ವಾದ ) ಜಿಲ್ಲಾ ಸಂಘಟನಾ ಸಂಚಾಲಕ ಯಲ್ಲಪ್ಪ ಕಾಂಬಳೆ ಮಾತನಾಡಿ, ವಿಜಯಪುರ – ಬಾಗಲಕೋಟ ಜಿಲ್ಲೆಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು 25 ರಿಂದ 30 ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರು ವಿಜಯಪುರ ಮತ್ತು ಬಾಗಲಕೋಟ ನಗರದಲ್ಲಿ ಬಡಜನರಿಗೆ ವಿತರಿಸುವ ನಿವೇಶನಗಳ ಕಾಮಗಾರಿಯನ್ನು ಅತ್ಯಂತ ಕಳಪೆ ಮಟ್ಟದಲ್ಲಿ ಕಾಮಗಾರಿ ನಿರ್ವಹಣೆ ಮಾಡಿರುತ್ತಾರೆ. ಸರ್ಕಾರದ ಎಸ್ಟಿಮೆಂಟ್ ಪ್ರಕಾರ ಯಾವುದೇ ಕಾಮಗಾರಿ ನಡೆದಿರುವುದಿಲ್ಲ. ನಾವು ಹಲವಾರು ಬಾರಿ ಆಫೀಸಿಗೆ ಬಂದು ವಿಚಾರಿಸಿದರೂ ನಮಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಆದಕಾರಣ ಇಂತಹ ಭ್ರಷ್ಟ ಅಧಿಕಾರಿಯನ್ನು ತಾವು ವಿಚಾರಣೆ ಮಾಡಿ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

