ಮುದ್ದೇಬಿಹಾಳ: ಡಾ.ಬಾಬಾ ಸಾಹೇಬರು ಮತ್ತು ಅವರ ತತ್ವಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದು ತಾಲೂಕು ದಂಡಾಧಿಕಾರಿ ಬಸವರಾಜ ನಾಗರಾಳ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ತಾಲೂಕಾಡಳಿತದ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತೀ ವರ್ಷ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಬಂದರೆ ಸಾಕು ಡಿಜೆ ಹಚ್ಚಿ ವಿಜ್ರಂಭಣೆಯಿಂದ ಆಚರಿಸುತ್ತೇವೆ. ಪಟ್ಟಣದಲ್ಲಿನ ಎಲ್ಲ ಪುತ್ಥಳಿಗಳನ್ನು ಅಲಂಕರಿಸುತ್ತೇವೆ. ಪೂಜೆ ಸಲ್ಲಿಸುತ್ತೇವೆ. ಆದರೆ ಬಾಬಾ ಸಾಹೇಬರ ಆದರ್ಶ ಮತ್ತು ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹಿಂಜರಿಯುತ್ತೇವೆ. ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರತೀ ವರ್ಷ ಡಾ.ಬಾಬಾ ಸಾಹೇಬರ ಜಯಂತಿಯ ದಿನದಂದು ಅವರ ಆದರ್ಶ ಮತ್ತು ತತ್ವಗಳ ಪೈಕಿ ಒಂದೊಂದನ್ನು ಅಳವಡಿಸಿಕೊಳ್ಳುತ್ತ ಹೋದರೆ ಹತ್ತು ವರ್ಷಗಳ ನಂತರ ಇಡೀ ಪ್ರಪಂಚಕ್ಕೆ ನಮ್ಮ ದೇಶ ಮಾದರಿಯಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಂ.ಎಚ್.ಹಾಲಣ್ಣನವರ ವಕೀಲರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ ಲಮಾಣಿ ಮಾತನಾಡಿದರು.
ಉಪನ್ಯಾಸಕ ಬಸವರಾಜ ಹುಬ್ಬಳ್ಳಿ ವಿಶೇಶ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಪೀಠಿಕೆಯನ್ನು ಬೋಧಿಸಿದರು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ತಾಲೂಕು ಪಂಚಾಯತ ನ ಪ್ರಭಾರ ಯೋಜನಾ ನಿರ್ದೇಶಕ ಖೂಬಾಸಿಂಗ್ ಜಾಧವ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೇಸ್ ಪಕ್ಷದ ಮುಖಂಡರಾದ ಶಾಂತಗೌಡ ಪಾಟೀಲ ನಡಹಳ್ಳಿ, ಶಿವಶಂಕರಗೌಡ ಹಿರೇಗೌಡರ, ಬಿ.ಕೆ.ಬಿರಾದಾರ, ವಾಯ್.ಎಚ್.ವಿಜಯಕರ ಸೇರಿದಂತೆ ಮತ್ತೀತರರು ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಜೀವನಾಧಾರಿತವಾದ ೪೫ ನಿಮಿಷಗಳ ಅದ್ಭುತ ನಾಟಕವನ್ನು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಂಗಮೇಶ ಶಿವಣಗಿ ತಂಡದವರು ನಾಡಗೀತೆ ಹಾಡಿದರು. ಶಿಕ್ಷಕ ಸಿದ್ದನಗೌಡ ಬಿಜ್ಜೂರ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

