Author: editor.udayarashmi@gmail.com

ವಿಜಯಪುರ: ವಿದ್ಯೆಗೆ ವಿನಯವೇ ಭೂಷಣವಾಗಿದ್ದು, ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಕಲಿಯುವ ಜತೆಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು.ಶಿಕ್ಷಣದಿಂದ ಸಾಧನೆ ಸಾಧ್ಯವಾಗಲಿದ್ದು, ಕಲಿಕೆಗೆ ಶ್ರದ್ಧೆ ಮತ್ತು ಪರಿಶ್ರಮ ಮುಖ್ಯ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ರವಿವಾರದಂದು ನಗರದ ಆಲಕುಂಟೆ ಬಡಾವಣೆಯ ಕನಕ ಕೋಚಿಂಗ್ ಕ್ಲಾಸ್ ನಲ್ಲಿ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆ ಹಾಗೂ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ “ಮುದ್ದು ಮನಸ್ಸುಗಳಿಗೆ ವಿವೇಕದ ಮಾತುಗಳು-ವ್ಯಕ್ತಿತ್ವ ವಿಕಸನ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಜೀವನದ ಔನ್ನತ್ಯಕ್ಕೆ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಬಹು ಮುಖ್ಯ. ಮಕ್ಕಳು ಆತ್ಮವಿಶ್ವಾಸ, ಬದ್ಧತೆ, ದಕ್ಷತೆ, ಸ್ಥಿರತೆ-ಈ ನಾಲ್ಕು ಅಂಶಗಳನ್ನು ತಮ್ಮ ಜೀವನದಲ್ಲಿ ಅನುಪಾಲಿಸಬೇಕು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು,ಸಂಯಮ, ನಿಷ್ಠೆಯಿದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ. ಶಿಸ್ತು ಮೈಗೂಡಿಸಿಕೊಂಡು ಸಮಯ ಪ್ರಜ್ಞೆಯಿಂದ ಕಲಿತರೆ ಸಾಧನೆ ಮಾಡುವುದು ಕಷ್ಟವಲ್ಲ. ಬದುಕಿನಲ್ಲಿ ಮಾನವೀಯತೆ ಹಾಗೂ…

Read More

ಚಿಮ್ಮಡ: ಇಂದಿನ ಸಾಧಕ ವಿದ್ಯಾರ್ಥಿಗಳ ಸತ್ಕಾರ, ಮುಂದಿನ ವಿದ್ಯಾರ್ಥಿಗಳಿಗೆ ಗುರಿ ತಲುಪಲು ಪ್ರೇರಣೆಯಾಗಲಿದೆ ಎಂದು ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯಣ್ಣವರ ಹೇಳಿದರು.ಗ್ರಾಮದ ಶ್ರೀ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದ ಅವರು ಪ್ರತಿಯೊಬ್ಬರ ಬದುಕು ರೂಪಿಸುವುದೇ ಶಿಕ್ಷಣವಾಗಿದ್ದು ತಮ್ಮ ಗುರಿ ಮುಟ್ಟುವವರೆಗೆ ವಿಶ್ರಮಿಸದೆ ಸತತ ಅದ್ಯಯನ ಕಠಿಣ ಪರೀಶ್ರಮದ ಮೂಲಕ ಮುಂದಿನ ಶಿಕ್ಷಣಕ್ಕೆ ಅಣಿಯಾಗುವುದರೊಂದಿಗೆ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕಾಗಿದೆ ಎಂದರು.ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯದ ಪಿಯುಸಿಯಲ್ಲಿ ಹಾಗೂ ಸರಕಾರಿ ಪ್ರೌಢಶಾಲೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ೮ ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವದರೊಂದಿಗೆ ಸಿಹಿ ಪೊಟ್ಟಣ ನೀಡಿ ಗೌರವಿಸಲಾಯಿತು. ಪ್ರಮುಖರಾದ ಮಹಾದೇವ ಕೋಳಿ, ಸಲೀಮ ಮುಜಾವರ, ಕಾಡಪ್ಪ ನಿಂಬರಗಿ ಸೆಇದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.

Read More

ಇಂಡಿ: ಪ್ರತಿ ವ್ಯಕ್ತಿಯಾಗಲಿ ಆಟಗಾರನಾಗಿರಲಿ ವಿದ್ಯಾರ್ಥಿಯಾಗಿರಲಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಫಲಿತಾಂಶ ಹೊಂದಿ ತೇರ್ಗಡೆಯಾಗಬೇಕಾದರೆ,ನಮ್ಮ ಬದುಕು ನಮ್ಮ ಸಂತೋಷ -ಸಂಭ್ರಮ ಪ್ರಯಾಣ ಪ್ರವಾಸ ನಿದ್ದೆ -ನೀರಡಿಕೆ ಬಂಧು-ಬಾಂಧವರೊಡನೆಯ ಒಡನಾಟ ಎಲ್ಲವನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಯಶಸ್ಸು ನಮಗೆ ತ್ಯಾಗಗಳಿಂದ ಸಿಗುತ್ತದೆ ಹೊರತು, ಅನಾಯಾಸವಾಗಿ ಅಲ್ಲ ಎಂದು ಸಾಹಿತಿ ದಶರಥ ಕೋರಿ ತಿಳಿಸಿದರು.ಇಂದು ಇಡೀ ರಾಜ್ಯಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಕುಂಬಾರ ಅತೀ ಹೆಚ್ಚು ಅಂಕ ಪಡೆದು ಮನೆ ಮಾತಾಗಿದ್ದಾಳೆ. ಅವಳ ಸಾಧನೆಗೆ ಇಡೀ ರಾಜ್ಯ ಸಂತೋಷ ಪಟ್ಟಿದೆ. ಸರಕಾರ ಅವಳ ಪ್ರತೀಭೆಗೆ ಪ್ರೋತ್ಸಾಹ ಧನವಾಗಿ ಇಂದು ಲಕ್ಷಾಂತರ ಹಣ ನೀಡಿ ಗೌರವಿಸಿದೆಸಾಧನೆ ಎನ್ನುವದು ಸಾಧಕನ ಸ್ವೊತ್ತು ಹೊರತು ಸೋಮಾರಿಯದಲ್ಲ ಎಂದು ಬೆಸ್ಟ್ ಕೋಚಿಂಗ್ ಕ್ಲಾಸಿನ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಹತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ…

Read More

ಮುದ್ದೇಬಿಹಾಳ: ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕವಡಿಮಟ್ಟಿ ಗ್ರಾಮದ ಹಳ್ಳದ ಬಳಿ ಶನಿವಾರ ರಾತ್ರಿ ೧೧ಗಂಟೆ ಸುಮಾರು ಸಂಭವಿಸಿದೆ.ಮೃತ ದುರ್ದೈವಿಯನ್ನು ಶಿವಾನಂದ ಭೀಮಪ್ಪ ದವಾಖಾನೆ(೫೯) ಎಂದು ಗುರುತಿಸಲಾಗಿದೆ. ಈತ ಮುದ್ದೇಬಿಹಾಳದ ಬಾರ್ ಒಂದರ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ. ತನ್ನ ಹೋಂಡಾ ಶೈನ್ ದ್ವಿಚಕ್ರ ವಾಹನದಿಂದ ನಾಲತವಾಡದ ಕಡೆಯಿಂದ ಮುದ್ದೇಬಿಹಾಳ ಕಡೆಗೆ ಸವಾರಿ ಮಾಡುತ್ತಿರುವಾಗ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು ಎದೆಗೆ ಜೋರಾಗಿ ಪೆಟ್ಟಾದ ಕಾರಣ ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Read More

ಮುದ್ದೇಬಿಹಾಳ: ಬಿಸಿಲಿನ ಧಗೆಗೆ ಬೇಸತ್ತ ಪಟ್ಟಣದ ಜನತೆಗೆ ರವಿವಾರ ಮಳೆರಾಯ ಕೊಂಚ ನೆಮ್ಮದಿ ನೀಡಿದ್ದಾನೆ. ಸುಮಾರು ಒಂದು ತಾಸು ಸಿಡಿಲು, ಗುಡುಗು ಸಮೇತ ಬಿಡದೇ ಸುರಿದ ಮಳೆ ಒಂದೆಡೆ ಭೂಮಿಯನ್ನು ತಂಪು ಮಾಡಿದರೆ, ಇನ್ನೊಂದೆಡೆ ಮಾರುತಿ ನಗರದ ಮುಖ್ಯ ಚರಂಡಿಯಲ್ಲಿದ್ದ ಹೊಲಸೆಲ್ಲ ರಸ್ತೆಯ ಮೇಲೆ ಬಂದು ಗಬ್ಬು ವಾಸನೆ, ತಿರುಗಾಡಲು ಸಾಧ್ಯವಾಗದೇ ಸಾರ್ವಜನಿಕರು ಪರದಾಡಿದ ಘಟನೆಯೂ ನಡೆಯಿತು.ಕಾಲ ಕಾಲಕ್ಕೆ ಚರಂಡಿಯಲ್ಲಿನ ಹೊಲಸು ಸ್ವಚ್ಛಗೊಳಿಸದ ಪರಿಣಾಮ ಮಳೆಯಾದರೆ ಸಾಕು ಎಲ್ಲ ಕಸ ಆಚೆ ಬಂದು ರಸ್ತೆಯಲ್ಲಿ ನಿಂತು ಜನತೆಗೆ ತೊಂದರೆ ಮಾಡಿದೆ ಎಂದು ಕೆಲ ಸಾರ್ವಜನಿಕರು ಪುರಸಭೆಯ ಮೇಲೆ ಹರಿಹಾಯ್ದರೆ, ಬಿಜೆಪಿ ಮುಖಂಡ ಸಿದ್ಧರಾಜ ಹೊಳಿ ತಮ್ಮ ಮನೆ ಎದುರು ತಿರುಗಾಡಲು ಬಾರದಷ್ಟು ನೀರು ನಿಂತಿದ್ದು ಇದಕ್ಕೆ ನಿಯಮ ಬಾಹಿರ ಯುಜಿಡಿ ಕಾಮಗಾರಿ ಮತ್ತು ಸುಮಾರು ವರ್ಷಗಳಿಂದ ಮನೆ ಕಟ್ಟದೇ ಖಾಲಿ ಇರುವ ಪ್ಲಾಟ್‌ಗಳು ಕಾರಣ ಎಂದು ಆರೋಪಿಸಿದರು. ಕೂಡಲೇ ಮನೆ ಕಟ್ಟದೇ ಖಾಲಿ ಬಿಟ್ಟಿರುವ ಪ್ಲಾಟ್ ನ ಮಾಲೀಕರಿಗೆ ಪುರಸಭೆ ನಿಯಮಾವಳಿಗಳ…

Read More

ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಸ್ ಮತ್ತು ಕೆಮಿಕಲ್ಸ್ ಅಡಿ ಎಬಿ ಬಯೋಕ್ರಾಪ್ ಕಂಪನಿಯಲ್ಲಿ ಮಣ್ಣು ತಪಾಸಣೆ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.ರಸಸಾರ, ಲವಣಾಂಶ, ಸಾವಯವ ಇಂಗಾಲ, ಸಾರಜನಕ, ರಂಜಕ, ಗಂಧಕ, ಪ್ಯೋಟ್ಯಾಷ, ಸತು, ಕಬ್ಬಿನಾಂಶ, ತಾಮ್ರ, ಮ್ಯಾಂಗನೀಸ್, ಬೋರಾನ್ ಈ ಎಲ್ಲ ರೀತಿಯ ಪೋಷಕಾಂಶಗಳನ್ನು ಪರೀಕ್ಷಿಸಿ ಮಣ್ಣಿನಲ್ಲಿ ಪೋಷಕಾಂಶದ ಕೊರತೆ ಕಂಡು ಬಂದಲ್ಲಿ ಅದಕ್ಕೆ ಸೂಕ್ತವಾದ ಗೊಬ್ಬರವನ್ನು ಒದಗಿಸುವುದಾಗಿ ಕಂಪನಿಯ ಹಣಮಂತಗೌಡ ಪಾಟೀಲ, ಅಧಿಕ ಪಾಟೀಲ, ಪ್ರಜ್ವಲ ಪಾಟೀಲ, ಶ್ರೀನಿವಾಸ ಅರಕೇರಿ, ನಾಗರಾಜ ಎನ್ ತಿಳಿಸಿದ್ದಾರೆ.

Read More

ಬ್ರಹ್ಮದೇವನಮಡು: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಬಸನಗೌಡ ನರಸಪ್ಪ ಗೌಡ ಪಾಟೀಲ, ಜಿಲ್ಲಾ ಕಾರ್ಯದರ್ಶಿಯಾಗಿ ಗೊಲ್ಲಾಳಪ್ಪ ಅಂಗಡಿ, ಗೌರವ ಅಧ್ಯಕ್ಷರಾಗಿ ಭೀಮನಗೌಡ ದೊಡ್ಡಮನಿ (ವಂದಾಲ) ಅವರನ್ನು ನೇಮಕ ಮಾಡಲಾಗಿದೆ.ಸಂಘದ ತತ್ವ ಸಿದ್ಧಾಂತಕ್ಕೆ ಬದ್ಧವಾಗಿ ಚಾಚು ತಪ್ಪದೆ ಪಾಲನೆ ಮಾಡಬೇಕು. ಕಾಯ ವಾಚ ಮನಸ್ಸು ಶುದ್ದವಾಗಿ ಕೆಲಸ ಮಾಡಬೇಕು.ಜತೆಗೆ ರೈತರ ಸಮಸ್ಶೆಗಳಿಗೆ ಸ್ಪಂದಿಸಿ ರೈತರಿಗೆ ನ್ಶಾಯ ದೊರಕಿಸಿ ಕೊಡುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯದ ಕನಾ೯ಟಕ ರಾಜ್ಶ ರೈತ ಸಂಘದ ಹಾಗೂ ಹಸಿರು ಸೇನೆ ಪ್ರಧಾನ ಕಾಯ೯ದಶಿ೯ ಅಮೀನ್ ಬಾಷಾ ದಿದ್ದಿಗಿ ಅವರು ಆದೇಶ ಹೊರಡಿಸಿದ್ದಾರೆ.

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ, ಬೆಂಗಳೂರು ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಎಂಬ ಹೆಸರಿನ ಸಾಮಾಜಿಕ ಜಾಲತಾಣಗಳ ಅಕೌಂಟಿನ ಯುವತಿಯೊಬ್ಬಳು ರಾಜ್ಯಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಯ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುತ್ತಾ, ಗೋಡೆಗಳಿಗೆ ಚಿತ್ರ ಬಿಡಿಸುತ್ತಾ, ನಿರಂತರವಾಗಿ ಸಾಕಷ್ಟು ಶ್ರಮ ಪಡುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ..ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ದಾನಿಗಳಿಂದ ಒಂದಷ್ಟು ಹಣ ಸಂಗ್ರಹಿಸಿ, ತನ್ನದೇ ಒಂದು ತಂಡ ಕಟ್ಟಿಕೊಂಡು, ಈ ರೀತಿ ಊರೂರು ಸುತ್ತುತ್ತಾ ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸಮಾಜ ಕೂಡ ಅದನ್ನು ಗುರುತಿಸಿ ಆಕೆಗೆ ಪ್ರೋತ್ಸಾಹಿಸುತ್ತಾ, ಪ್ರಶಸ್ತಿ ಸನ್ಮಾನ ನೀಡುತ್ತಾ, ಗೌರವಿಸುತ್ತಿದೆ.. ನಿಜಕ್ಕೂ ಬದುಕಿನ ಸಾರ್ಥಕತೆ ಅಡಗಿರುವುದೇ ಇಲ್ಲಿ. ನೆಪೋಲಿಯನ್ ಬೋನಾಪಾರ್ಟೆ ಎಂಬ ಫ್ರಾನ್ಸಿನ ಕ್ರಾಂತಿಕಾರಿ ಹೀಗೆ ಹೇಳುತ್ತಾನೆ “ನಾವು ಹುಟ್ಟಿದ ಮೇಲೆ ನಾವಿಡುವ ಪ್ರತಿ ಹೆಜ್ಜೆಯಲ್ಲೂ ಒಂದೊಂದು ಗುರುತು ಬಿಟ್ಟು ಹೋಗಬೇಕು ” ಇಡೀ ಸಮಾಜ ಎಷ್ಟೇ ಅಧೋಗತಿಯ ಕಡೆ ಚಲಿಸುತ್ತಿದ್ದರು ಇಂತಹ ಕೆಲವರ ಸೇವೆಗಳು ಸಮಾಜ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ತಂದೆ ತಾಯಂದಿರ ಸೇವೆ ಮಾಡಬೇಕು, ಗುರು ಹಿರಿಯರನ್ನು ಗೌರವಿಸಬೇಕು, ಒಡಹುಟ್ಟಿದವರನ್ನು ಮತ್ತು ಸ್ನೇಹಿತರನ್ನು ಪ್ರೀತಿಸಬೇಕು, ಸಂಗಾತಿಯನ್ನು ಪ್ರೇಮಿಸಬೇಕು ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು ಒಬ್ಬ ಒಳ್ಳೆಯ ನಾಗರಿಕನಾಗಿ ಬದುಕಬೇಕು….. ಹೀಗೆ ನಮಗೆ ನಾವೇ ನೂರೆಂಟು ಯೋಜನೆಗಳನ್ನು ಹಾಕಿಕೊಂಡು ಬದುಕುವ ನಾವು ನಮ್ಮ ವೈಯುಕ್ತಿಕ ಬೆಳವಣಿಗೆಗಾಗಿ, ಸ್ವಯಂ ಪ್ರೀತಿಗಾಗಿ ಏನನ್ನು ಮಾಡುತ್ತಿದ್ದೇವೆ ಎಂದು ಕೇಳಿದರೆ ಪ್ರತಿಯೊಬ್ಬರು ಆಶ್ಚರ್ಯದಿಂದ ಕೇಳಬಹುದು ಮೇಲಿನ ಎಲ್ಲ ಕೆಲಸಗಳನ್ನು ಮಾಡಿದರೆ ಸಾಕಲ್ಲವೆ ಎಂದು?! ಊಹೂಂ!ಖಂಡಿತ ಸಾಲದು!! ನಮಗಿರುವುದು ಒಂದೇ ಬದುಕು…. ಎಲ್ಲರಿಗೂ ಎಲ್ಲವನ್ನೂ ಮಾಡುತ್ತ ಬದುಕಿನ ಕೊನೆಯ ಗಳಿಗೆಯಲ್ಲಿ ಅಯ್ಯೋ ನನಗಾಗಿ ನಾನೇನು ಮಾಡಿಲ್ಲ ಎಂಬ ಅಪರಾಧ ಪ್ರಜ್ಞೆಯಿಂದ ಬಳಲುವುದು ನಮಗೆ ನಾವು ಮಾಡಿಕೊಳ್ಳುವ ಅತಿ ದೊಡ್ಡ ಅಪಚಾರ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಜೀವನಗಳಿರುತ್ತವೆ ಒಂದು ಖಾಸಗಿ ಮತ್ತು ಮತ್ತೊಂದು ಸಾಮಾಜಿಕ. ನಮ್ಮ ಸಾಮಾಜಿಕ ಜೀವನವನ್ನು ಅನುಭವಿಸುವ ನಿಟ್ಟಿನಲ್ಲಿ ನಮ್ಮ ಖಾಸಗಿತನ ಕಳೆದೇಹೋಗುತ್ತದೆ. ಬದುಕಿನ ಕೊನೆಯ ಗಳಿಗೆಯಲ್ಲಿ ಪಶ್ಚಾತಾಪ ಪಡುವುದಕ್ಕಿಂತ ಅನುಭವಿಸುವ…

Read More