Author: editor.udayarashmi@gmail.com

ವಿಜಯಪುರ: ೨೦೨೪-೨೫ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಾಕ್ಕಾಗಿ ನಾಲ್ಕನೇ ಹಂತದ ಆಫ್‌ಲೈನ್ ಮೂಲಕ ಅರ್ಜಿಯನ್ನುಯ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆ ಪಾಸದ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಮೇ.೩೦ರ ಒಳಗಾಗಿ ಪ್ರವೇಶ ಬಯಸುವ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸತಕ್ಕದ್ದು. ಮೇ.೩೦ ರಂದು ಅರ್ಹ ಮೆರೆಟ್ ಪಟ್ಟಿ ತಯಾರಿಸಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಮೇ.೩೦ರ ಮರ್ಧಯಾಃನ ನಂತರ ಆಫ್‌ಲೈನ್ ಕೌನ್ಸ್ಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಹಾಗೂ ಪ್ರವೇಶ ಶುಲ್ಕಗಳನ್ನು ಪ್ರವೇಶಾತಿ ಪಡೆಯಬಹುದು ಎಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೧೧೦ ಕೆವಿ ಇಂಡಿ ವಿದ್ಯುತ್ ವಿತರಣ ಕೇಂದ್ರದಲ್ಲಿ ಪರಿವರ್ತಕದ ಆಯಿಲ್ ಸೋರುವಿಕೆ ತಡೆಗಟ್ಟುವ ಕಾಮಗಾರಿ ಕೈಗೊಂಡಿರುವುದರಿಂದ ಮೇ.೨೯ ರಂದು ಬೆಳಗ್ಗೆ ೮ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಸದರಿ ವಿದ್ಯುತ್ ವಿತರಣ ಕೇಂದ್ರದಿದ ಸರಬರಾಜು ಆಗುವ ೩೩ಕೆವಿ ತಾಂಬಾ ನಲ್ಲಿ ಮೇ.೩೦ರಂದು ಬೆಳಗ್ಗೆ ೮ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ೩೩ಕೆವಿ ನಾದ, ೩೩ ಕೆವಿ ತಡವಲಗಾ ವಿದ್ಯುತ್ ವಿತರಣಾ ಕೇಂದ್ರದ ಮಾರ್ಗಗಳ ಮೇಲೆ ಬರುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದೆ.ಆದ ಕಾರಣ ನಾಗರೀಕರು ಹಾಗೂ ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಇಂಡಿಯ ಕಾರ್ಯ ಮತ್ತು ಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೨೦೨೪-೨೫ ನೆಯ ಶೈಕ್ಷಣಿಕ ಸಾಲಿಗೆ ಈ ಕೆಳಗೆ ನಮೂದಿಸಿರುವ ಓಅಗಿಖಿ ನವದೆಹಲಿಯಿಂದ ಸಂಯೋಜನೆಯಾದ ೨ವರ್ಷದ ಮತ್ತು ೦೧ ವರ್ಷದ ಕೋರ್ಸಗಳಿಗೆ (ಎಲೆಕ್ಟಿçಷಿಯನ್, ಇ¯ಕ್ಟಾçನಿಕ್ ಮೆಕ್ಯಾನಿಕ್, ಮೆಕ್ಯಾನಿಕ್ ಎಲೆಕ್ಟಿçಕ್ ವೆಹಿಕಲ್, ಇಂಡಸ್ಟಿçಯಲ್ ರೋಬೋಟಿಕ್ಸ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ ಟೆಕ್ನಾಲಜಿ, ಜೋಡಣೆಗಾರ) ಪ್ರವೇ± ಆನ್‌ಲೈನ್ (ಛಿiಣe.ಞಚಿಡಿಟಿಚಿಣಚಿಞಚಿ.gov.iಟಿ) ಮೂಲಕ ಅರ್ಜಿಗಳನ್ನು ಆವ್ಹಾನಿಸಲಾಗಿದೆ. ಹಾಗೂ ಖುದ್ದಾಗಿ ಕಾಲೇಜಿನಲ್ಲಿ ಕೂಡ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜೂನ್ ೩ ಕೊನೆಯ ದಿನವಾಗಿದೆ.ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಾಲತವಾಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಅಥವಾ ದೂರವಾಣಿ ಮುಖಾಂತರ (೮೦೫೦೩೨೨೯೮೦ ,೯೯೮೬೧೨೩೮೯೩ , ೯೦೦೮೬೯೨೨೭೦ ) ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಪೂಜಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಮತ ಎಣಿಕೆಯು ಜೂನ್ ೪ರಂದು ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಮತ ಎಣಿಕೆ ಕಾರ್ಯವನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಲು ಅನೂಕೂಲವಾಗಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರಗದಂತೆ ನೋಡಿಕೊಳ್ಳಲು ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ರ ಕಲಂ ೧೩೫ ಸಿ ಅಡಿಯಲ್ಲಿ ಜೂ. ೪ ರಂದು ಬೆಳಗ್ಗೆ ೬ ರಿಂದ ಜೂನ್ ೫ ರ ಬೆಳಗಿನ ೬ ಗಂಟೆಯವರೆಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಗೆ ಹಾಗೂ ಸಂಗ್ರಹವನ್ನು ನಿಷೇಧಿಸಿ “ಶುಷ್ಕ ದಿನ” ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.

Read More

ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ/ರಿಯಾಯತಿ ಬಸ್ ಪಾಸ್ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವಾಸಿಂಧು ತಂತ್ರಾಂಶದ ಮೂಲಕ ವಿದ್ಯಾರ್ಥಿಗಳು ಕೆ-೧ ಸೆಂಟರ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹದಾಗಿದೆ ಎಂದು ವಿಜಯಪುರ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಾನಪದ ಸಾಹಿತ್ಯ ಕೇವಲ ಮನರಂಜನೆಯ ವಸ್ತು ಅಲ್ಲ. ಅದು ಸಾರ್ವತ್ರಿಕ ಮೌಲ್ಯಗಳನ್ನು ಹಾಡು, ಗಾದೆ, ಒಡಪು, ಕಥೆ ಮತ್ತು ನುಡಿಗಳ ಮೂಲಕ ಜನತೆಗೆ ಕಲಾತ್ಮಕವಾಗಿ ತಲುಪಿಸಿ ಬದುಕು ಸುಧಾರಿಸುವ ಶ್ರೇಷ್ಠ ಪರಂಪರೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರುಕನ್ನಡ ಜಾನಪದ ಪರಿಷತ್ ತಾಲೂಕಾ ಘಟಕ ನಿಡಗುಂದಿ ಹಾಗೂ ಮಹರ್ಷಿ ವಾಲ್ಮೀಕಿ ಸಾಂಸ್ಕೃಿತಿಕ ಸಂಘ ಮುದ್ದಾಪುರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮುದ್ದಾಪುರ ಮಾರುತೇಶ್ವರ ದೇವಾಲಯದಲ್ಲಿ ಜಾನಪದ ಕಲಾ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಮ್ಮ ಹಳ್ಳಿಗಳು ಜಾನಪದ ಸಂಸ್ಕೃತಿಯನ್ನು ಜೋಪಾನವಾಗಿ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ . ಸಮಾಜ ಮತ್ತು ಸಂಘ ಸಂಸ್ಥೆಗಳು ಕಲಾವಿದರನ್ನು ಬೆಳೆಸಬೇಕೆಂದು ಮನವಿ ಮಾಡಿದರು.ನಿಡಗುಂದಿ ತಾಲೂಕಾ ಕ ಜಾ ಪ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಜಾನಪದ ಪರಿಷತ್ ವತಿಯಿಂದ ಹಳ್ಳಿಗಳಲ್ಲಿ ಕಲಾವಿದರನ್ನು ಗುರುತಿಸಿ ಅವರನ್ನು ಬೆಳೆಸುವ ಕೆಲಸ…

Read More

ಸಂತೋಷರಾವ್ ಪೆರ್ಮುಡ,ಪೆರ್ಮುಡ – ಬೆಳ್ತಂಗಡಿ, ದ.ಕನ್ನಡ ಜಿಲ್ಲೆ ‘ಬೆಂಕಿಯಲಿ ಅರಳಿದ ಹೂವು’ ಎಂಬ ಚಲನಚಿತ್ರದಲ್ಲಿ ಕಷ್ಟಗಳು ನೋವುಗಳು ಅದೆಷ್ಟೇ ಬಂದರೂ ಸೋಲನ್ನೊಪ್ಪಿಕೊಳ್ಳದೇ ಧೈರ್ಯದಿಂದ ಮುಂದಕ್ಕೆ ಸಾಗಿದಾಗ ಸುಖ ಸಂತೋಷಗಳು ದೊರೆಯುತ್ತವೆ ಎಂಬ ಸಂದೇಶವನ್ನು ನೀಡಿದ್ದಾರೆ. ಕಷ್ಟಗಳಿದ್ದಾಗಲೇ ಸಾಧನೆಯ ಹಸಿವು ಹೆಚ್ಚಿ ಯಶಸ್ಸನ್ನೂ ಗಳಿಸಿಕೊಳ್ಳುತ್ತಾನೆ. ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಯು ಹತ್ತು ಬಾರಿ ಸೋತರೂ ಹನ್ನೊಂದನೆಯ ಬಾರಿ ಮತ್ತೆ ಎದ್ದು ನಿಂತು ಗೆಲ್ಲಲು ಪ್ರಯತ್ನಿಸುತ್ತಾನೆ. ಋಣಾತ್ಮಕ ಧೋರಣೆಯ ವ್ಯಕ್ತಿಯು ಒಂದೆರಡು ಬಾರಿ ಪ್ರಯತ್ನಿಸಿ ಸೋಲನ್ನು ಒಪ್ಪಿಕೊಂಡು ಬಿಡುತ್ತಾನೆ.ಅಟೋಮೊಬೈಲ್ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿರುವ ಹೋಂಡಾ ಕಂಪನಿಯ ಸಂಸ್ಥಾಪಕ ಸೋಯಿಚಿರೋ ಹೋಂಡಾ ತನ್ನದೇ ಆದ ಅಟೋಮೊಬೈಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಲು ಪಟ್ಟ ಶ್ರಮವನ್ನು ಊಹಿಸಲೂ ಸಾಧ್ಯವಿಲ್ಲ. ನೋವುಗಳ ನಂತರವೇ ಸುಖವಿರುವುದು ಎನ್ನುವುದಕ್ಕೆ ಇವರೇ ಉತ್ತಮ ಉದಾಹರಣೆ.ಸುಯಿಚಿರೋ ಹೋಂಡಾ ಹುಟ್ಟಿದ್ದು ಜಪಾನ್ ದೇಶದಲ್ಲಿ. ಬಡತನದಿಂದ ಕೂಡಿದ ಕೆಳ ಮಧ್ಯಮ ವರ್ಗದಲ್ಲಿ ಇವರು ಜನಿಸುತ್ತಾರೆ. ದಿನದಲ್ಲಿ ಎರಡು ಹೊತ್ತಿನ ಊಟವಷ್ಟೇ ಇವರಿಗಿದ್ದ ಆಸ್ತಿ. ತನ್ನ ಸಣ್ಣ ವಯಸ್ಸಿನಲ್ಲೇ ತಾನು ಜಗತ್ತೇ…

Read More

“ವೀಣಾಂತರಂಗ”- ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ, ಗದಗ ಅದೊಂದು ಪುಟ್ಟ ಸಭಾಂಗಣ. ಅಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರು. ತರಹೇವಾರಿ ಸೀರೆಗಳಲ್ಲಿ ಹಿರಿಯರು ಮಿಂಚುತ್ತಿದ್ದರೆ, ತರುಣಿಯರು ನವೀನ ಮಾದರಿಯ ಬಟ್ಟೆಗಳನ್ನು ಧರಿಸಿ, ಪುಟ್ಟ ಮಕ್ಕಳು ಬಣ್ಣ ಬಣ್ಣದ ಫ್ರಾಕುಗಳನ್ನು ಮ್ಯಾಕ್ಸಿಗಳನ್ನು ಧರಿಸಿ ಮಿಂಚುತ್ತಿದ್ದರು.ತಮಾಶೆಯ ಆಟಗಳು, ಸ್ಪರ್ಧೆಗಳು ನಡೆದು ಇನ್ನೇನು ವೇದಿಕೆ ಕಾರ್ಯಕ್ರಮ ಆರಂಭವಾಗಬೇಕು. ಮಿಲಿಟರಿ ಕಮಾಂಡರ್ ಅವರ ಪತ್ನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.ಅವರನ್ನು ಪರಿಚಯಿಸುತ್ತಾ ಕಾರ್ಯಕ್ರಮದ ನಿರೂಪಕಿ ಆಕೆಯ ಪತಿಯನ್ನು ಕೂಡ ಹೊಗಳುತ್ತಾ ಶ್ರೀಮತಿ ಉಷಾ ಅವರನ್ನು ಅವರ ಪತಿ ಸಂತೋಷವಾಗಿ ಇಟ್ಟಿದ್ದಾರೆ ಎಂದು ಹೇಳಿದರು. ಇದೀಗ ಮಾತನಾಡುವ ಸರದಿ ಶ್ರೀಮತಿ ಉಷಾ ಅವರದು… ಸಭೆಯಲ್ಲಿ ಹಾಜರಿರುವ ಎಲ್ಲರನ್ನೂ ಅಭಿನಂದಿಸುತ್ತಾ ಕಾರ್ಯಕ್ರಮವನ್ನು ಕುರಿತು ಒಂದೆರಡು ನಿಮಿಷ ಮಾತನಾಡಿದ ಆಕೆ ಕೊನೆಯಲ್ಲಿ ಹೇಳಿದ್ದು ಇಷ್ಟು…. ನನ್ನನ್ನು ನನ್ನ ಪತಿ ಸಂತೋಷವಾಗಿ ಇರಿಸಿದ್ದಾರೆ ಎಂಬುದು ಸುಳ್ಳು. ಸಂತೋಷವಾಗಿ ಇರಲೇಬೇಕು ಎಂಬುದು ನನ್ನ ಆಯ್ಕೆಯಾಗಿತ್ತು. ನನಗೆ ನಾನು ಎಂದು ಮೋಸ ಮಾಡಿಕೊಳ್ಳಬಾರದು, ನನಗಿರುವುದು ಒಂದೇ…

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ. ಬೆಂಗಳೂರು ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಚಿತ್ರರಂಗ ಅವಸಾನದ ಅಂಚಿಗೆ ಬಂದು ತಲುಪುತ್ತದೆ. ಆದ್ದರಿಂದ ಏನಾದರೂ ಕ್ರಮ ಕೈಗೊಳ್ಳಲೇಬೇಕು..ಮುಖ್ಯವಾಗಿ ಪ್ರಖ್ಯಾತ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು. ಏಕೆಂದರೆ ಅವರಿಂದ ಒಂದಷ್ಟು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬಹುದು ಎಂಬ ನಿರೀಕ್ಷೆ. ಹಾಗೆಯೇ ಬಿ ಮತ್ತು ಸಿ ದರ್ಜೆಯ ಚಿತ್ರಮಂದಿರಗಳು ಬಹುತೇಕ ಮುಚ್ಚುವ ಹಂತದಲ್ಲಿವೆ ಅಥವಾ ಮುಚ್ಚಿವೆ. ಈಗ ದಾರಿ ಕಾಣದಾಗಿದೆ ಎಂಬ ಚರ್ಚೆಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ..ಯಾವಾಗಲೂ ಒಂದು ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಾದಾಗ ಆ ಕ್ಷೇತ್ರದ ಜನ ಅಷ್ಟಕ್ಕೇ ಸೀಮಿತವಾಗಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ ಜಾಗತೀಕರಣದ ನಂತರ ಈ ರೀತಿಯ ಅನೇಕ…

Read More