ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ಕಾಮರ್ಸ್ (ಸ್ವಾಯತ್ತ)ಕಾಲೇಜಿನ ಎಂ.ಬಿ.ಎ ವಿಭಾಗವು ಭಾರತದ ಖ್ಯಾತ ನಿಯತಕಾಲಿಕ ಔಟಲುಕ್-ಐಕೇರ್ ನಡೆಸಿದ ಸಮೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್ ಪಡೆದಿದೆ.
ರಾಜ್ಯದ ಪ್ರತಿಷ್ಠಿತ 32 ಕಾಲೇಜುಗಳಲ್ಲಿ 15ನೇ ಸ್ಥಾನ ಮತ್ತು ಭಾರತದ ಖ್ಯಾತ 200 ಕಾಲೇಜುಗಳಲ್ಲಿ 70ನೇ ರ‌್ಯಾಂಕ್(Rank) ಪಡೆದಿದೆ. ಅಲ್ಲದೇ, ರಾಜ್ಯದ ಮಾನ್ಯತೆ ಪಡೆದ ಕಾಲೇಜುಗಳ ವಿಭಾಗದಲ್ಲಿ ಪ್ರತಿಷ್ಠಿತ 14 ಕಾಲೇಜುಗಳಲ್ಲಿ 3ನೇ ಹಾಗೂ ದೇಶದ 96 ಕಾಲೇಜುಗಳಲ್ಲಿ 13ನೇ ರ‌್ಯಾಂಕ್ (Rank) ಪಡೆದಿದೆ.
ದಕ್ಷಿಣ ಭಾರತ ವಿಭಾಗದಲ್ಲಿ ಪ್ರತಿಷ್ಠಿತ 72 ಕಾಲೇಗಳಲ್ಲಿ 28ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ.
ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ಅತ್ಯುತ್ತಮ ಬೋಧನೆ ಮತ್ತು ಕಲಿಕೆ, ಸಂಶೋಧನೆ ಹಾಗೂ ನಾವೀನ್ಯತೆ, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣದತ್ತ ಇರುವ ಬದ್ಧತೆಯನ್ನು ಪರಿಗಣಿಸಿ ಈ ರ‌್ಯಾಂಕ್ (Rank) ನೀಡಲಾಗಿದೆ.
ಬಿ. ಎಲ್. ಡಿ. ಇ ಎಂ.ಬಿ.ಎ ಕಾಲಡಜಿನ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಬಿ. ಪಾಟೀಲ ಅವರು ಸಂತಸ ವ್ಯಕ್ತಪಡಿಸಿದ್ದು, ಈ ಸಾಧನೆಗೆ ಕಾರಣರಾದ ಆಡಳಿತಾಧಿಕಾರಿಗಳು, ಪ್ರಾಚಾರ್ಯರು, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಗಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

