Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಸತಿ ಯೋಜನೆ ಶೀಘ್ರ ಜಾರಿ; ಭೂಮಿ ಗುರುತಿಸಲು ಸೂಚನೆ

ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ

ಎ.ಎಸ್.ಪಾಟೀಲ ಕಾಲೇಜ್ ಎಂ.ಬಿ.ಎ ವಿಭಾಗಕ್ಕೆ ಅತ್ಯುತ್ತಮ‌ ರ್ಯಾಂಕ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕೇಳಿಸಿಕೊಳ್ಳುವ ಪ್ರಕ್ರಿಯೆ
ವಿಶೇಷ ಲೇಖನ

ಕೇಳಿಸಿಕೊಳ್ಳುವ ಪ್ರಕ್ರಿಯೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಹುತೇಕ ವಿದ್ಯಾರ್ಥಿಗಳು ಕೇಳಿಸಿಕೊಳ್ಳುವ ಪ್ರಥಮ ಹಂತದ ಪ್ರಕ್ರಿಯೆಯಲ್ಲಿ ವಿಫಲರಾಗಿ ಮುಂದಿನೆಲ್ಲಾ ಪ್ರಕ್ರಿಯೆಗಳಲ್ಲೂ ವಿಫಲರಾಗುತ್ತಾರೆ. ಪಾಠವನ್ನು ಸಮರ್ಪಕವಾಗಿ ಕಿವಿಯು ಕೇಳಿಸಿಕೊಂಡಾಗ ಅದನ್ನು ಮೆದುಳಿನಲ್ಲಿರುವ ನರವ್ಯೂಹವು ಸಮರ್ಪಕವಾಗಿ ಗ್ರಹಿಸಿ ಅರ್ಥೈಸಿಕೊಂಡು ನೆನಪಿಟ್ಟುಕೊಳ್ಳುತ್ತದೆ. ನಂತರ ನಿರ್ದಿಷ್ಟವಾದ ಅಂಗಗಳಿಗೆ ಪ್ರತಿಕ್ರಿಯಿಸಲು (ಮಾತಿನ ರೂಪದಲ್ಲಿ, ಬರವಣಿಗೆಯ ರೂಪದಲ್ಲಿ, ಸಂಜ್ಞೆಗಳ ರೂಪದಲ್ಲಿ ಯಾ ಕೆಲಸದ ರೂಪದಲ್ಲಿ) ಸೂಚನೆಯನ್ನು ನೀಡುತ್ತದೆ.

– ಸಂತೋಷ್ ರಾವ್ ಪೆರ್ಮುಡ.
ಪೆರ್ಮುಡ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ – ದ.ಕನ್ನಡ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಕೇಳಿಸಿಕೊಳ್ಳಲು ಕಿವಿ ಅವಶ್ಯವಾಗಿ ಬೇಕು. ಕಿವಿಯಲ್ಲಿ ೩ ವಿಧಗಳಿದ್ದು, ಹೊರ ಕಿವಿ, ನಡು ಕಿವಿ, ಹಾಗೂ ಒಳ ಕಿವಿ. ಹೊರಕಿವಿಯಲ್ಲಿರುವ ಭಾಗಗಳೆಂದರೆ ಕಿವಿಯ ಹಾಲೆ (ಪಿನ್ಯಾ) ಮತ್ತು ಕರ್ಣನಾಳ. ಇದು ಕಿವಿಯ ಹಾಲೆಯಿಂದ ಕಿವಿಯ ತಮಟೆಯವರೆಗೆ ಆವರಿಸಿದೆ. ಪರಿಸರದಲ್ಲಿ ಉಂಟಾಗುವ ಶಬ್ಧಗಳನ್ನು ನಮ್ಮ ಹೊರಕಿವಿಯನ್ನು ಮೊದಲು ತಲುಪುತ್ತವೆ. ಹೊರಕಿವಿಯ ವಿಶಿಷ್ಟ ಆಕಾರದಿಂದ ಶಬ್ಧ ಶೇಖರಣೆಯಾಗುತ್ತದೆ. ಹೊರಕಿವಿಯ ಹಾಲೆ ಮತ್ತು ನಾಳವು ಶಬ್ಧವನ್ನು ಶೇಖರಿಸಿ ಮಧ್ಯಕಿವಿಗೆ ವರ್ಗಾಯಿಸುತ್ತದೆ. ಹೊರಕಿವಿಯಿಂದ ಹಾದು ಹೋದ ಶಬ್ಧದ ಅಲೆಗಳು ಕಿವಿಯ ತಮಟೆಯನ್ನು ಮುಟ್ಟಿದಾಗ ಕಿವಿಯ ತಮಟೆಯ ಚಲನೆ ಸೂಕ್ಷ್ಮವಾಗಿರುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಶಬ್ಧಗಳಿಗೆ ತಮಟೆಯ ಚಲನೆ ಹೆಚ್ಚಿನ ಪ್ರಮಾಣದ್ದಾಗಿರುತ್ತದೆ. ಈ ತಮಟೆ ಪದರಗಳಿಂದ ಕೂಡಿರುತ್ತದೆ.
ಮಧ್ಯಕಿವಿಯು ತಮಟೆಯ ಹೊರ ಹಾಗೂ ಮಧ್ಯಕಿವಿಯನ್ನು ಬೇರ್ಪಡಿಸುತ್ತದೆ. ತಮಟೆಗೆ ಬಂದು ತಲುಪಿದ ಶಬ್ಧ ಅದರ ಚಲನೆಯಿಂದ ತಮ್ಮೊಳಗೆ ಹುದುಗಿಸಿಕೊಂಡಿರುವ ಮೂಳೆಗಳಿಗೆ ವರ್ಗಾವಣೆಯಾಗುತ್ತದೆ. ಆ ಮೂಳೆಗಳು ಕ್ರಮವಾಗಿ ಇಂಕಸ್, ಮ್ಯಾಲಿಯಸ್, ಸ್ಟೆಪಿಸ್ ಮೂಲಕ ಶಬ್ಧಗಳನ್ನು ರವಾನಿಸುತ್ತದೆ. ಈ ಮೂರು ಮೂಳೆಗಳಲ್ಲಿ ದೊಡ್ಡದಾದದ್ದು ಕಿವಿಯ ತಮಟೆಯಲ್ಲಿ ಹುದುಗಿದ್ದರೆ, ಚಿಕ್ಕದು ಒಳಕಿವಿಯೊಂದಿಗೆ ಸಂಪರ್ಕ ಹೊಂದಿರುತ್ತದೆ. ಒಳಕಿವಿಗೆ ಚಕ್ರವ್ಯೂಹ ಎಂದು ಕರೆಯುತ್ತಾರೆ. ಒಳಕಿವಿ ಒಂದು ಬಟಾಣಿ ಕಾಳಿನ ಗಾತ್ರದಷ್ಟಿದ್ದು, ಇದು ಅತೀ ತೊಡಕಾದ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಇದರ ಕಾರ್ಯದ ದೃಷ್ಟಿಯಿಂದ ಒಳಕಿವಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಕಾಕ್ಲಿಯ ಮತ್ತು ವೆಸ್ಟಬ್ಯುಲಾರ್ ಮೆಕಾನಿಸಂ.


ಕಾಕ್ಲಿಯವು ಕೇಳಿಸಿಕೊಳ್ಳುವಲ್ಲಿ ಅತೀ ಪ್ರಮುಖ ಪಾತ್ರವಹಿಸುವ ಅಂಗವಾಗಿದೆ. ಇದು ಒಳಕಿವಿಯ ಕೆಳಭಾಗದಲ್ಲಿದ್ದು ಬಸವನ ಹುಳುವಿನ ಆಕಾರವನ್ನು ಹೊಂದಿದ್ದು, ಎರಡೂವರೆ ಸುತ್ತುಗಳನ್ನು ಹೊಂದಿದೆ. ವೆಸ್ಟ ಬ್ಯುಲಾರ್ ಮೆಕಾನಿಸಂ ಮಧ್ಯಕಿವಿಯಿಂದ ಒಳಕಿವಿಗೆ ಸಂಪರ್ಕ ಹೊಂದಿದೆ. ಈ ಭಾಗದಲ್ಲಿ ಸಮತೋಲನದ ಅಂಗಗಳಾದ ಅರ್ಧ ಚಂದ್ರಾಕಾರದ ನಾಳವಿದ್ದು, ಇದು ಕಿವಿಯ ಒಳಭಾಗದಲ್ಲಿರುತ್ತದೆ.
ಕಿವಿಯು ಶಬ್ಧದ ತರಂಗಗಳನ್ನು ಸಂಗ್ರಹಿಸಿ ಹೊರ ಕಿವಿಯ ನಾಳದಲ್ಲಿ ಹಾದು ಹೋಗುವಂತೆ ಮಾಡುತ್ತದೆ. ಈ ಶಬ್ಧ ತರಂಗಗಳು ಕಿವಿಯ ತಮಟೆಯ ಹೊಡೆದು ತಮಟೆಯು ಕಂಪಿಸುತ್ತದೆ. ಈ ತಮಟೆಯ ಅಂಟಿಕೊಂಡಿರುವ ಮಧ್ಯಕಿವಿಯ ಮೂರು ಮೂಳೆಗಳ ಸರಪಳಿಯು ಈ ಕಂಪನವನ್ನು ಒಳಕಿವಿಗೆ ಸಾಗಿಸುತ್ತದೆ. ಈ ಕಂಪನಗಳು ಕಾಕ್ಲಿಯಾದ ಸುತ್ತಲಿರುವ ಪೆರಿಲಿಂಪ್ ದ್ರವವನ್ನು ಚೇತನಗೊಳಿಸಿ ಅದರಲ್ಲಿ ಕಂಪನಗಳನ್ನು ಉಂಟುಮಾಡುತ್ತದೆ. ಇದರಿಂದ ಕಾಕ್ಲಿಯಾದ ಒಳಗಿರುವ ಎಂಡೋಲಿಂಫ್ ದ್ರವದಲ್ಲಿ ಕಂಪನಗಳು ಉತ್ಪನ್ನವಾಗಿ ಕಾಟಿ ಅಂಗವನ್ನು ಪ್ರಚೋದಿಸುತ್ತದೆ. ಈ ಪ್ರಚೋದನೆಗಳನ್ನು ಕಾಟಿ ಅಂಗದಲ್ಲಿರುವ ಗ್ರಾಹಕಗಳು ಸ್ವೀಕರಿಸಿ ಶ್ರವಣ ನರಗಳ ಮೂಲಕ ಮೆದುಳಿಗೆ ಕಳಿಸುತ್ತದೆ. ಮೆದುಳಿನಲ್ಲಿರುವ ಈ ಸಂದೇಶಗಳನ್ನು ಅರ್ಥೈಯಿಸಲ್ಪಟ್ಟಾಗ ನಮಗೆ ಶಬ್ಧ ಕೇಳುತ್ತದೆ. ಹೀಗೆ ಅತೀ ಕಡಿಮೆ ಅವಧಿಯಲ್ಲಿ ಕೇಳಿಸಿಕೋಳ್ಳುವ ಕ್ರಿಯೆ ಪೂರ್ಣವಾಗುತ್ತದೆ.


ಹಾಗಾಗಿ ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠವನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು. ಬಹುತೇಕ ವಿದ್ಯಾರ್ಥಿಗಳು ಕೇಳಿಸಿಕೊಳ್ಳುವ ಪ್ರಥಮ ಹಂತದ ಪ್ರಕ್ರಿಯೆಯಲ್ಲಿ ವಿಫಲರಾಗಿ ಮುಂದಿನೆಲ್ಲಾ ಪ್ರಕ್ರಿಯೆಗಳಲ್ಲೂ ವಿಫಲರಗುತ್ತಾರೆ. ಪಾಠವನ್ನು ಸಮರ್ಪಕವಾಗಿ ಕಿವಿಯು ಕೇಳಿಸಿಕೊಂಡಾಗ ಅದನ್ನು ಮೆದುಳಿನಲ್ಲಿರುವ ನರವ್ಯೂಹವು ಸಮರ್ಪಕವಾಗಿ ಗ್ರಹಿಸಿ ಅರ್ಥೈಸಿಕೊಂಡು ನೆನಪಿಟ್ಟುಕೊಳ್ಳುತ್ತದೆ. ನಂತರ ನಿರ್ದಿಷ್ಟವಾದ ಅಂಗಗಳಿಗೆ ಪ್ರತಿಕ್ರಿಯಿಸಲು (ಮಾತಿನ ರೂಪದಲ್ಲಿ, ಬರವಣಿಗೆಯ ರೂಪದಲ್ಲಿ, ಸಂಜ್ಞೆಗಳ ರೂಪದಲ್ಲಿ ಯಾ ಕೆಲಸದ ರೂಪದಲ್ಲಿ) ಸೂಚನೆಯನ್ನು ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಮರ್ಪಕವಾಗಿ ವಿಚಾರವನ್ನು ಕೇಳಿಸಿಕೊಳ್ಳದಿದ್ದಾಗ ಮೆದುಳು ಗ್ರಹಿಸಲು ವಿಫಲವಾಗಿ ಪಠ್ಯವು ಅರ್ಥವಾಗದೇ ಅಧ್ಯಯನವು ಕಠಿಣವಾಗುತ್ತದೆ. ಮತ್ತು ನಿರ್ದಿಷ್ಟ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿಯೂ ಹಿನ್ನಡೆಯಾಗುತ್ತದೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಸತಿ ಯೋಜನೆ ಶೀಘ್ರ ಜಾರಿ; ಭೂಮಿ ಗುರುತಿಸಲು ಸೂಚನೆ

ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ

ಎ.ಎಸ್.ಪಾಟೀಲ ಕಾಲೇಜ್ ಎಂ.ಬಿ.ಎ ವಿಭಾಗಕ್ಕೆ ಅತ್ಯುತ್ತಮ‌ ರ್ಯಾಂಕ್

ನಿನ್ನ ಸೂಜಿಗಣ್ಣಿನ ನೋಟದೊಂದಿಗೆ..

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಸತಿ ಯೋಜನೆ ಶೀಘ್ರ ಜಾರಿ; ಭೂಮಿ ಗುರುತಿಸಲು ಸೂಚನೆ
    In (ರಾಜ್ಯ ) ಜಿಲ್ಲೆ
  • ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ
    In (ರಾಜ್ಯ ) ಜಿಲ್ಲೆ
  • ಎ.ಎಸ್.ಪಾಟೀಲ ಕಾಲೇಜ್ ಎಂ.ಬಿ.ಎ ವಿಭಾಗಕ್ಕೆ ಅತ್ಯುತ್ತಮ‌ ರ್ಯಾಂಕ್
    In (ರಾಜ್ಯ ) ಜಿಲ್ಲೆ
  • ಕೇಳಿಸಿಕೊಳ್ಳುವ ಪ್ರಕ್ರಿಯೆ
    In ವಿಶೇಷ ಲೇಖನ
  • ನಿನ್ನ ಸೂಜಿಗಣ್ಣಿನ ನೋಟದೊಂದಿಗೆ..
    In ವಿಶೇಷ ಲೇಖನ
  • ನಿನ್ನ ಸೂಜಿಗಣ್ಣಿನ ನೋಟದೊಂದಿಗೆ..
    In Uncategorized
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 24,2026
    In ದಿನಪತ್ರಿಕೆ
  • ಬಾಲಭಾರತಿ ಶಾಲೆ: ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
  • ಬಸವ ತತ್ವ ಜಗದ ತತ್ವ- ಅಂತರಾಷ್ಟ್ರೀಯ ವಿಚಾರ ಸಂಕಿರಣ ಇಂದು
    In (ರಾಜ್ಯ ) ಜಿಲ್ಲೆ
  • ಹೊರಗುತ್ತಿಗೆ ನೇಮಕಾತಿಯಲ್ಲಿ ವಿಕಲಚೇತನರಿಗೆಉದ್ಯೋಗಾವಕಾಶ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.