ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಿಂದಗಿ ತಾಲೂಕಿನ ಯುವ ಘಟಕದ ನೂತನ ಅಧ್ಯಕ್ಷರಾಗಿ ದೇವಣಗಾಂವ ಗ್ರಾಮದ ಯುವಕ ಪ್ರಶಾಂತ ಶಿವಯೋಗೆಪ್ಪ ಭೂಸನೂರ ರವರನ್ನು ಆಯ್ಕೆ ಮಾಡಲಾಗಿದೆ .
ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿಯವರು ಮತ್ತು ಚೂನ್ನಪ್ಪ ಪೂಜಾರಿ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನೀತಿನ ಮ್ಯಾಕೇರಿ ಮತ್ತು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ರವರ ನೇತೃತ್ವದಲ್ಲಿ ಸಿಂದಗಿ ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ್, ಕವಿರಾಜ ಲಾಳಸಂಗಿ, ಪ್ರವೀಣ ಭೂಸನೂರ, ಸಂತೋಷ ಪೂಜಾರಿ, ರಘು ಇತರೆ ರೈತ ಮುಖಂಡರು ಉಪಸ್ಥಿತರಿದ್ದರು.

