ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪುರಸಭೆಯಿಂದ ಬೀದಿಬದಿ ವ್ಯಾಪಾರಸ್ಥರ ಲೈಸನ್ಸ್ದೊಂದಿಗೆ ತಾಳಿಕೋಟೆ ನಗರದ ಕೆಲವು ಭಾಗಗಳಲ್ಲಿ ತಮ್ಮ ಸಣ್ಣ ಪುಟ್ಟ ವ್ಯಾಪಾರಗಳೊಂದಿಗೆ ಜೀವನ ಸಾಗಿಸುತ್ತಾ ಸಾಗಿದ್ದಾರೆ. ಅಂತಹ ವ್ಯಾಪಾರಸ್ಥರನ್ನು ಯಾವುದೇ ಕಾರಣಕ್ಕೂ ತೆರವು ಗೊಳಿಸಕೂಡದೆಂದು ಕರ್ನಾಟಕ ಪ್ರದೇಶ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳ ರಕ್ಷಣೆಗಾಗಿ ರೂಪಿಸಲಾದ ಕಾಯ್ದೆಯಡಿ ಸುಮಾರು ೨೦೦ ಕ್ಕೂ ಅಧಿಕ ಬೀದಿಬದಿ ವ್ಯಾಪಾರಸ್ಥರು ಪುರಸಭೆಯಿಂದ ವ್ಯಾಪಾರಿ ಪರವಾನಿಗೆ ಪಡೆದುಕೊಂಡಿದ್ದು ಪ್ರತಿದಿನ ಭೂ ಬಾಡಿಗೆಯನ್ನು ಪುರಸಭೆಗೆ ಭರಣಾ ಮಾಡುತ್ತಿದ್ದಾರೆ, ಕಾರಣ ತಾವುಗಳು ಯಾವುದೇ ರೀತಿಯ ಕಾನೂನು ಕಾಯ್ದೆಗಳನ್ನು ಅನುಸರಿಸದೇ ತಾವುಗಳು ತೆರವುಗೊಳಿಸಲು ಮುಂದಾಗಿದ್ದು, ಈ ತೆರವು ಕಾರ್ಯಚರಣೆಯ ಮುಂಚೆ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಬೇರೆಡೆ ವ್ಯಾಪಾರ ಮಾಡುವಂತೆ ಸುಸಜ್ಜಿತ ಜಾಗವನ್ನು ಗುರುತು ಮಾಡಿ ಅಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಒದು ವೇಳೆ ಯಾವುದೇ ಕಾರಣ ನೀಡದೇ ಬಿದಿ ಬದಿ ವ್ಯಾಪಾರಿಗಳ ಮೇಲೆ ನಿರ್ಲಕ್ಷ ತೋರಿದಲ್ಲಿ ಎಲ್ಲ ಬೀದಿಬದಿ ವ್ಯಾಪಾರಿಗಳು ಕಾನೂನು ಬದ್ದವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಮನವಿ ಪತ್ರವನ್ನು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರಿಗೆ ಸಲ್ಲಿಸಿದರು.
ಈ ಸಮಯದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಬೂಬ ಕುಳಗೇರಿ, ನದೀಂ ಕಡು, ಮುಸ್ತಫಾ ಅತ್ತಾರ, ಇಸ್ಮಾಯಿಲ್ ಮುರಾಳ, ರಫೀಕ್ ಚೌದ್ರಿ, ಸಾದ ಪಠಾಣ, ಮೌಲಾ ಯಾದವ, ಮುಮ್ತುಜ ಅತ್ತಾರ, ದುರ್ಗಾಬಾಯಿ ಹಿಂಗಮೋರೆ, ದೇವಜಿನಾಥ ಹಿಂಗಮೋರೆ, ಬಸವರಾಜ ಬಂಡಾರಿ, ದಾವಲಸಾ ಪಾನವಾಲೆ, ಸೈಯದ ಶಹಾಪೂರ, ಗುತ್ತಮ್ಮ ಮಂಗ್ಯಾಳ, ನಾನೇಶ್ವರ ಹಿಂಗಮೋರೆ, ಖಾದಿರಸಾಬ ಅಸ್ಕಿ, ಮೈಹಿಬೂಬ ಚೌದ್ರಿ, ಮುಕ್ತುಮ ಬಳಗಾನೂರ, ರಾಜೇಸಾಬ ಯಲಗಾರ, ಮಾಸುಮ ಕೇಂಭಾವಿ, ಚಂದ್ರೇಶಖರ ಮಂಗ್ಯಾಳ, ಮಲ್ಲಪ್ಪ ಮೇಸ್ತಾನಕಿ, ನೀಲಮ್ಮ ಮೇಸ್ತಾನಕಿ, ಮಾದೇವಿ ಅಂಗಡಿ, ಅಬ್ದುಲ್ ಜಬ್ಬಾರ, ದಾವಲಸಾ ಮುಲ್ಲಾ, ಶಿವಮ್ಮ ಕುಂಟೋಜಿ, ದೇವಮ್ಮ ಲಚ್ಚಾಣ, ಮೊದಲಾದವರು ಇದ್ದರು.

