ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ರಾಷ್ಟ್ರಧ್ವಜ ನಮ್ಮ ಸ್ವಾತ್ಯಂತ್ರದ ಹೆಗ್ಗುರುತಾಗಿದೆ. ಇದು ನಾಡಿನ ತ್ಯಾಗ ಬಲಿದಾನ, ಸತ್ಯ ಶಾಂತಿ, ಸಂವೃದ್ದಿಗಳನ್ನು ಬಿಂಬಿಸುತ್ತದೆ. ಈ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವದೇ, ನಿಜವಾದ ದೇಶ ಸೇವೆ ಎಂದು ಪ್ರಾಧ್ಯಾಪಕ ದೊಡ್ಡಣ್ಣ ಬಜಂತ್ರಿ ಹೇಳಿದರು.
ಪಟ್ಟಣದ ಬಿಎಲ್ಡಿಈ ಕಲಾ ಕಾಲೇಜದಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಭಾರತ ಸ್ಕೌಟ್ಸ್, ಗೈಡ್ಸ್ ಹಾಗೂ ಭಾರತ ಸೇವಾದಳ ಬುಧವಾರ ವತಿಯಿಂದ ನಡೆದ ರಾಷ್ಟ್ರ ಧ್ವಜದ ಪ್ರಾತ್ಯಕ್ಷಿಕೆಯ ಮೂಲಕ ರಾಷ್ಟ್ರ ಧ್ವಜದ ಬಲಕೆ ಕುರಿತಾಗಿರುವ ಸಂವಿಧಾನಾತ್ಮಕ ಕಟ್ಟುನಿಟ್ಟುಗಳನ್ನು ಪಾಲಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರದ್ವಜ ಬಹು ಮುಖ್ಯ ಗೌರವವಾಗಿರುವದರಿಂದ ಇದನ್ನು ದೇಶಕ್ಕಾಗಿ ಮಡಿದವರ ದೇಹದ ಮೇಲೆ ಮಾತ್ರ ಹಾಕಲಾಗುತ್ತದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಎಸ್. ತೋಳನೂರ, ಬಿ. ಎಸ್. ಬೆಳಗಲಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಯೋಜಕ ಎಸ್. ಎಲ್. ರಾಠೋಡ, ಸುಶಾಂತ ಜವನಾರ, ರವಿ ಕಿತ್ತೂರ, ಮೋಹನ ಕಟ್ಟಿಮನಿ, ನಾಗೇಶ ಡೊಣುರ, ಡಾ.ಸಂತೋಷ ನವಲಗುಂದ ಇದ್ದರು.

