ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಬಣಜಿಗ ಸಮೂದಾಯವು ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಅತ್ಯಂತ ಹಿಂದೂಳಿದ ಸಮಾಜವಾಗಿದೆ ಕೂಡಲೇ ಬಣಜಿಗ ಸಮಾಜಕ್ಕೆ ೨ಎ ಮಿಸಲಾತಿ ನೀಡುವದರೊಂದಿಗೆ ಸಮಾಜವನ್ನು ಮುಖ್ಯವಾಹಿನಿ ಗುರುತಿಸಿಕೊಳ್ಳಲು ಸರ್ಕಾರವು ಕ್ರಮ ವಹಿಸಬೇಕೆಂದು ತಾಲೂಕಾ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮಂಗಳವಾರ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಸಮಾಜ ಬಾಂದವರು ತಾಲೂಕಾ ತಹಶಿಲ್ದಾರ ಶ್ರೀಮತಿ ಡಾ.ವಿನಯಾ ಹೂಗಾರ ಅವರ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದ ಅವರು ಬಣಜಿಗ ಸಮಾಜವು ಶೈಕ್ಷಣಿಕವಾಗಿ ಅತ್ಯಂತ ಹಿಂದೂಳಿದಿದೆ ಸರ್ಕಾರಿ ನೇಮಕಾತಿಯಲ್ಲಿ ಅವಕಾಶದಿಂದ ವಂಚಿತರಾಗುತ್ತಾ ಸಾಗಿದ್ದಾರೆ ಇದು ಸಂವಿದಾನದ ಸದಾಶಯಕ್ಕೆ ವ್ಯತಿರಿಕ್ತವಾಗಿದೆ ನ್ಯಾಯಾಲಯದ ಆದೇಶದಂತೆ ಬಣಜಿಗ ಸಮಾಜಕ್ಕೆ ನ್ಯಾಯ ಒದಗಿಸಲು ಕೂಡಲೇ ಸರ್ಕಾರವು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಮಯದಲ್ಲಿ ಬಣಜಿಗ ಸಮಾಜದ ಮುಖಂಡರುಗಳಾದ ಎಂ.ಎಸ್.ಸರಶೆಟ್ಟಿ, ಮಲ್ಲಿಕಾರ್ಜುನ ಕತ್ತಿ, ಈರಣ್ಣ ಕಲ್ಬುರ್ಗಿ, ಚನಬಸ್ಸು ಸರಶೆಟ್ಟಿ, ಮಲ್ಲಿಕಾರ್ಜುನ ಸರಶೆಟ್ಟಿ, ರಮೇಶ ಸಾಲಂಕಿ, ಶಿವಲಿಂಗಪ್ಪ ಪಾಲ್ಕಿ, ಗುರುಸಂಗಪ್ಪ ಜಮ್ಮಲದಿನ್ನಿ, ಮಲ್ಲು ಸರಶೆಟ್ಟಿ, ಮಲ್ಲಿಕಾರ್ಜುನ ಪಾಲ್ಕಿ, ಶಾಂತಪ್ಪ ಇಜೇರಿ, ಮಹಾಂತೇಶ ಸರಶೆಟ್ಟಿ, ಕಾಶಿನಾಥ ಪಾಲ್ಕಿ, ಮಹೇಶ ದೇವಶೆಟ್ಟಿ, ಚನಮಲ್ಲು ಕತ್ತಿ, ಈಶ್ವರಪ್ಪ ಕತ್ತಿ, ಕಾಶಿನಾಥ ಮಡ್ಡಿ, ಸಂಗಮೇಶ ಪಾಲ್ಕಿ ಒಳಗೊಂಡು ತುಂಬಗಿ, ಚಬನೂರ, ಒಳಗೊಂಡು ಇನ್ನಿತರ ಗ್ರಾಮಗಳಿಂದ ಆಗಮಿಸಿದ ಸಮಾಜ ಬಾಂದವರು ಉಪಸ್ಥಿತರಿದ್ದರು.

