ರೈತರ ಬೆಳೆಸಾಲ ಮನ್ನಾ ಮಾಡಲು ಒತ್ತಾಯ | ಮುಖ್ಯಮಂತ್ರಿಗಳಿಗೆ ರೈತಸಂಘ ತಾಲೂಕಾಧ್ಯಕ್ಷ ಸಾತಲಿಂಗಯ್ಯಾ ಸಾಲಿಮಠ ಮನವಿ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮುಂಗಾರು ಮತ್ತು ಹಿಂಗಾರು ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ತಿಕೋಟಾ ತಾಲ್ಲೂಕನ್ನು ಬರಪಿಡೀತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಗ್ರೇಡ್ 2 ತಹಶಿಲ್ದಾರ ಎಚ್.ಎನ್.ಬಡಿಗೇರ ಮುಖಾಂತರ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕಾಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಇನ್ನೂವರೆಗೆ ಭೂಮಿಯಲ್ಲಿ ಬಿತ್ತನೆ ಮಾಡಿರುವದಿಲ್ಲ. ಇನ್ನೂ ಕೆಲ ರೈತರು ಮಳೆ ಆಸೆ ಇಟ್ಟುಕೊಂಡು ಬಿತ್ತನೆ ಮಾಡಿದರೆ ಇದ್ದ ಬೆಳೆಗಳು ಒಣಗುತ್ತಿವೆ, ಮತ್ತೆ ಸಾಲದ ಸುಳಿಗೆ ಸಿಕ್ಕು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ರೈತರ ನೆರವಿಗೆ ಬರಬೇಕು.
ಸಮಸ್ತ ರೈತರು ಕಣ್ಣಿರು ಹಾಕುವ ಪರಿಸ್ಥಿತಿ ನಿರ್ಮಾನವಾಗಿದ್ದು, ರೈತರ ಕಷ್ಟವನ್ನು ತಾವು ಅರ್ಥಮಾಡಿಕೊಂಡು ಬೆಳೆಸಾಲ ಮನ್ನಾ ಮಾಡಬೇಕು. ಬರ ಪರಿಹಾರ ಘೋಷಣೆ ಮಾಡಿ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು. ಒಂದು ವೇಳೆ ಸರಕಾರ ತಿಕೋಟಾ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೊಷಣೆ ಮಾಡದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ವತಿಯಿಂದ ರೈತರು ಒಟ್ಟುಗೂಡಿ ಪ್ರತಿಭಟನೆಯೊಂದಿಗೆ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಶಾಖೆ ತಿಕೋಟಾ ಮ್ಯಾನೇಜರ ಅವರ ಮುಖಾಂತರ ಪ್ರತಿಯೋಬ್ಬ ರೈತರಿಗೆ ಬಡ್ಡಿ ರಹಿತ ಐದು ಲಕ್ಷದ ವರೆಗೆ ಸಾಲ ನೀಡಬೇಕೆಂದು ಡಿಸಿಸಿ ಬ್ಯಾಂಕ ಅದ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ರೈತ ಮುಖಂಡರಾದ ಶಾನೂರ ನಂದರಗಿ, ಹನಮಂತ ಬ್ಯಾಡಗಿ, ಧರೆಪ್ಪ ಅನಂತಪೂರ, ಸಂಗೀತಾ ರಾಠೋಡ, ರೇಖಾ ಲಕ್ಷ್ಮಣ ಹಿಟ್ನಳ್ಳಿ, ಅನಸೂಯಾ ಪ್ರಕಾಶ ಬಡಿಗೇರ, ಮಾಯವ್ವ ಉಪ್ಪಾರ,
ಶಿವಪ್ಪ ಪಟ್ಟಣಶೇಟ್ಟಿ, ಮೋಶಿನ ಮುಜಾವರ, ಸುರೇಶ ಕೋಣ್ಣುರ, ರವಿಕೀರಣ ಹೊಸೂರ, ಅಬ್ದೂಲಗಣಿ ದಾಶ್ಯಾಳ, ಬುಳ್ಳಪ್ಪ ಪೂಜಾರಿ, ಶಿವಾನಂದ ಅಂಕಲಗಿ, ಮಾನಿಂಗ ಕುಂಬಾರ, ಖಾದರಸಾಬ ವಾಲೀಕಾರ, ನಾಶಿರ ಮಕಾನದಾರ ಇದ್ದರು.

