Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಾಧನೆ ಸಾಧಕನ ಸ್ವತ್ತಲ್ಲದೇ ಸೋಮಾರಿಯ ಸ್ವತ್ತಲ್ಲ
ವಿಶೇಷ ಲೇಖನ

ಸಾಧನೆ ಸಾಧಕನ ಸ್ವತ್ತಲ್ಲದೇ ಸೋಮಾರಿಯ ಸ್ವತ್ತಲ್ಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ.
ಪೆರ್ಮುಡ ಮನೆ,
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಎಲ್ಲರಿಗೂ ಜೀವನದಲ್ಲಿ ಏನಾದರೊಂದು ಸಾಧನೆಯನ್ನು ಮಾಡಬೇಕು ಎನ್ನುವ ಹಂಬಲವಿರುವುದು ಸಹಜ. ಅದರಲ್ಲೂ ಎಲ್ಲರೂ ಗುರುತಿಸುವಂತಹ ಸಾಧನೆಯನ್ನು ಮಾಡಬೇಕು ಎನ್ನುವ ಆಸೆಯಿರುವವರು ಒಂದಷ್ಟು ಮಂದಿ. ಇದಕ್ಕಾಗಿ ‘ಎಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎನ್ನುವ ವಿವೇಕಾನಂದರ ವಾಣಿಯನ್ನು ನೆನಪಿಸಿಕೊಳ್ಳುತ್ತಾರೆ. ಈ ಬದುಕಿರುವುದೇ ಸಾಧಿಸುವುದಕ್ಕಾಗಿ, ಸಾಧನೆಯಿಲ್ಲದ ಈ ಬದುಕೇ ವ್ಯರ್ಥವೆಂದು ಒಂದಷ್ಟು ಮಂದಿ ಭಾವಿಸಿರುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಸಾಧನೆಯನ್ನು ಮಾಡಲು ಹೊರಟು ಅಂತಿಮವಾಗಿ ಅವರು ತಲುಪುವುದೇ ಸ್ವಾರ್ಥದ ಬದುಕಿಗೆ. ಇಂಥಹ ಬಹುತೇಕ ಸಾಧಕರು ತಮ್ಮ ಸ್ವಾರ್ಥ ಸಾಧನೆಯಲ್ಲಿ ಕಳೆದೇ ಹೋಗುತ್ತಾರೆ. ನಿಜವಾದ ಸಾಧನೆಯೆಂದರೆ ಒಂದಷ್ಟು ಮಂದಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿ, ಅದನ್ನು ಜನರೇ ಗುರುತಿಸುವಂತಹ ಸಾಧನೆ.


ಒಂದು ದಟ್ಟವಾದ ಕಾಡಿನಲ್ಲಿ ಸೋಮಾರಿಯಾದ ಕ್ರೂರಿ ಸಿಂಹವೊಂದು ಇತ್ತು. ಸಿಂಹವೆಂದರೆ ಎಲ್ಲೆಡೆ ಕಾಡಿನ ರಾಜನೆಂದೇ ಚಿರಪರಿಚಿತ. ಈ ಸಿಂಹವು ಕಾಡಿನ ರಾಜನಾಗಿ ಯಾವುದೇ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸದೇ ಸೋಮಾರಿಯಾಗಿ ಕಾಲವನ್ನು ಕಳೆಯುತ್ತಿತ್ತು. ಕಾಲಕ್ರಮೇಣ ತನ್ನ ಸೋಮಾರಿತನದ ಕಾರಣದಿಂದಾಗಿ ಸಿಂಹದ ಜನಪ್ರಿಯತೆಯು ಕಡಿಮೆಯಾಗುತ್ತಾ ಹೋಯಿತು. ಇದನ್ನರಿತ ಸಿಂಹವು ಕಾಡಿನಲ್ಲೇ ಅತ್ಯಂತ ಎತ್ತರವಾದ ಬಂಡೆಕಲ್ಲನ್ನೇರಿ ನಿಂತು ತಾನು ಎಲ್ಲರಿಗೂ ಕಾಣಿಸುತ್ತಿದ್ದೇನೆಯೇ ಎಂದು ಕೇಳಿ, ನಾನು ಈ ಕಾಡಿನ ರಾಜನೆಂದು ಕೂಗಿ ಹೇಳಿತು. ಇದನ್ನು ಕೇಳಿದ ಕಾಡಿನ ಇತರ ಪ್ರಾಣಿಗಳು ‘ಕೇವಲ ಎತ್ತರದಲ್ಲಿ ಏರಿ ನಿಂತ ಮಾತ್ರಕ್ಕೆ ರಾಜನಾಗುತ್ತಾರೆಯೇ’ ಎಂದು ನಗಲಾರಂಭಿಸಿದವು.
ಅದೇ ರೀತಿ ಜನರೆಲ್ಲರೂ ನನ್ನನ್ನು ನೋಡಬೇಕು ಎಂಬ ಕಾರಣಕ್ಕಾಗಿ ಎತ್ತರದ ಸ್ಥಾನ/ಸ್ಥಳ/ಹುದ್ದೆಗೆ ಏರಿಕೊಂಡು ಕುಳಿತುಕೊಳ್ಳಬಾರದು. ಬದಲಿಗೆ ಆ ಸ್ಥಾನದಲ್ಲಿ ಕುಳಿತಾಗ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆಗೆ ಜಗತ್ತೆಲ್ಲಾ (ತನ್ನ ಕಾರ್ಯ ವ್ಯಾಪ್ತಿಯ ಜನರ ಕಷ್ಟ ಸುಖಗಳು) ಸಂಪೂರ್ಣವಾಗಿ ನನಗೆ ಕಾಣಲಿ, ಜಗತ್ತಿನೆಲ್ಲಾ ಆಗು ಹೋಗುಗಳೆಲ್ಲಾ ನನಗೆ ಕಾಣಿಸಬೇಕು, ಅದನ್ನು ನಾನು ತಿಳಿದುಕೊಳ್ಳಬೇಕು ಎನ್ನುವಂತ ಹಂಬಲದಿಂದ ಆ ಸ್ಥಾನ/ಹುದ್ದೆ/ಸ್ಥಳಕ್ಕೆ ಏರಬೇಕು. ಸಾಧಕನಾಗುವ ಹಂಬಲವಿರುವ ಎಲ್ಲರೂ ಜಗತ್ತಿನೆಲ್ಲಾ ವಿಚಾರಗಳನ್ನು ಅರಿಯಬೇಕೆಂಬ ಹಂಬಲವನ್ನು ಹೊಂದಿದಲ್ಲಿ ನಿಧಾನವಾಗಿ ಸಾಧನೆಯ ಹಾದಿಯಲ್ಲಿ ಸಾಗಬಹುದು. ಇಲ್ಲವಾದರೆ ಸ್ವಾರ್ಥ ಸಾಧನೆಯಾಗಬಹುದು. ಇದಕ್ಕೇ ಹಿರಿಯರು ಸಾಧನೆಯು ಸಾಧಕನ ಸ್ವತ್ತಲ್ಲದೇ ಸೋಮಾರಿಯ ಸ್ವತ್ತಲ್ಲ ಎನ್ನುವ ಗಾದೆ ಪ್ರಚಲಿತದಲ್ಲಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026
    In ದಿನಪತ್ರಿಕೆ
  • ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ
    In (ರಾಜ್ಯ ) ಜಿಲ್ಲೆ
  • ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸೆ.೨೪ರಂದು ೧೫ ಗ್ರಾಮಗಳಲ್ಲಿ ಪಿಂಚಣಿ ಅದಾಲತ್
    In (ರಾಜ್ಯ ) ಜಿಲ್ಲೆ
  • ಮೈಸೂರು ದಸರಾ: ಕನ್ನಡ ಪುಸ್ತಕಗಳ ಮಾರಾಟ ಮೇಳಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರ ಆರೋಗ್ಯ-ಮಕ್ಕಳ ಶಿಕ್ಷಣಕ್ಕೆ ಆದ್ಯತೆ
    In (ರಾಜ್ಯ ) ಜಿಲ್ಲೆ
  • ಹೊಸನಗರ ಹಳ್ಳದ ಸೇತುವೆ ಮೇಲೆ ಸಂಚಾರಕ್ಕೆ ಸಂಚಕಾರ
    In (ರಾಜ್ಯ ) ಜಿಲ್ಲೆ
  • ಬೇನಾಳ ಗ್ರಾಮಕ್ಕೆ ನುಗ್ಗಿದ ಮೊಸಳೆ ಮರಿ :ಆತಂಕದಲ್ಲಿ ಗ್ರಾಮಸ್ಥರು
    In (ರಾಜ್ಯ ) ಜಿಲ್ಲೆ
  • ಶಿವಾನಂದ ತಗಡೂರ ಗೆ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.