Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಆತ್ಮವಿಶ್ವಾಸ
ವಿಶೇಷ ಲೇಖನ

ಆತ್ಮವಿಶ್ವಾಸ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಶ್ರದ್ಧಾ ಮುಂಡಾಜೆ
ಮುಂಡಾಜೆ
ದಕ್ಷಿಣ ಕನ್ನಡ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

“ಈ ಹಾಳೆಗಳ ಮೇಲೆ ಸಹಿ ಹಾಕಿ ಮೇಡಂ. ನೀವು ಸೈನ್ ಮಾಡಿದ ನಂತರ “ಲೀಗಲಿ ಯೂ ಬೋತ್ ಆರ್ ಡೈವೋರ್ಸ್ಡ್” ಎನ್ನುತ್ತಾ ವಕೀಲರು ತಮ್ಮ ಕುರ್ಚಿಗೆ ಒರಗಿ ಕುಳಿತರು. ಅವರ ಮಾತುಗಳನ್ನು ಕೇಳಿ ಸೀತಾಳ ಮನವು ದುಃಖ, ನೋವು, ಹತಾಶೆ ಯಿಂದ ಸ್ತಬ್ದವಾಗತೊಡಗಿತು . ಜೀವಕ್ಕೆ ಜೀವವಾಗಿರುತ್ತೇನೆಂದು ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದ ಗಂಡ ಇಂದು ನನ್ನನ್ನು ಯಾವುದೋ ಕಾರಣಕ್ಕೆ ದೂರ ಇಟ್ಟುಕೊಂಡಿರುವುದನ್ನು ಅರಗಿಸಲು ಸಾಧ್ಯವಾಗದೆ ಆಕೆಯ ಮನಸ್ಸೆಂಬ ಗಾಜಿಗೆ ಮೋಸವೆಂಬ ಕಲ್ಲು ಜೋರಾಗಿ ಬಡಿದು, ಅವಳ ಮನಸ್ಸು ಮುರಿದೆ ಹೋಗಿತ್ತು.


ಇಬ್ಬರು ಪುಟಾಣಿ ಮಕ್ಕಳು, ಜೀವನ ನಡೆಸಲು ನೌಕರಿಯಿಲ್ಲ, ಗಂಡನಿಂದ ಒಂದು ಪೈಸೆಗೂ ಕೈ ಚಾಚಲಿಲ್ಲ. ಖಾಲಿ ಕೈ, ಖಾಲಿ ಮನಸ್ಸು , ಭಾರವಾದ ಹೃದಯ ಹೊತ್ತು ಹೊರ ನಡೆದಳು ಸೀತಾ. ಮಕ್ಕಳನ್ನು ಕರೆದುಕೊಂಡು ನಡೆಯುತ್ತಾ ನಡೆಯುತ್ತಾ ದೇವಸ್ಥಾನ ತಲುಪಿದ ಆಕೆಗೆ ಕೇಳಿಸಿದ್ದು ಗುರುಗಳು ತಮ್ಮ ಶಿಷ್ಯಯರಿಗೆ ನೀಡುತ್ತಿದ್ದ ಅಂದಿನ ಪ್ರವಚನ.
” ಶಿಷ್ಯರೇ.. ಇಂದಿನ ದಿನ ಅತ್ಯಂತ ಶುಭವಾಗಿದೆ. ಇಂದು ನಿಮಗೆಲ್ಲ ಯಾವ ಪ್ರವಚನ ಕೇಳುವ ಮನಸ್ಸಾಗಿದೆಯೋ ಅದನ್ನೇ ಹೇಳುತ್ತೇನೆ” ಎಂದು ಗುರುಗಳು ನುಡಿದರು. ಅವರ ಮಾತಿಗೆ ಅದರಲ್ಲಿದ್ದ ಒಬ್ಬ ಬಾಲಕ “ಗುರುಗಳೇ, ಜೀವನದಲ್ಲಿ ಆತ್ಮವಿಶ್ವಾಸದ* ಮಹತ್ವವೇನು? ” ಎಂದು ಪ್ರಶ್ನಿಸಿದನು. ಆಗ ಗುರುಗಳು ಇಬ್ಬರು ಬಾಲಕರನ್ನು ಗುಂಪಿನಿಂದ ಕರೆದು ” ಅಗೋ ಅಲ್ಲಿ ನೋಡಿ.. ಅಷ್ಟು ದೂರದಲ್ಲಿರುವ ಆ ಸಂಪಿಗೆಮರದ ತುದಿಯಲ್ಲಿರುವ ಸಂಪಿಗೆ ಹೂವನ್ನು ನೀವು ನನಗೆ ತಂದುಕೊಡಬೇಕು. ನೆನಪಿಡಿ, ಆ ಮರ ತುಂಬಾ ಎತ್ತರವಿದೆ. ಅಲ್ಲಿಂದ ಬಿದ್ದರೆ ನಿಮ್ಮ ಪ್ರಾಣಕ್ಕೆ ಅಪಾಯ” ಎಂದು ಎಚ್ಚರಿಸಿದರು.
ಇಬ್ಬರು ಬಾಲಕರು ಆ ಮರವನ್ನೊಮ್ಮೆ ದಿಟ್ಟಿಸಿ ನೋಡಿದರು. ಅವರಿಬ್ಬರ ಮುಖ ನೋಡಿದ ಗುರುಗಳು, ಯಾರು ಹೋಗುವಿರಿ ? ಎಂದು ಕೇಳಿದಾಗ ಒಬ್ಬ ಬಾಲಕ ಹೆದರಿ ಹಿಂಜರಿದರೆ ಇನ್ನೊಬ್ಬ ತನ್ನಿಂದ ಸಾಧ್ಯ ಎಂದು ಮುನ್ನಡೆಯಲು ನಿರ್ಧರಿಸಿರುತ್ತಾನೆ. ಆಗ ಗುರುಗಳು ಎಲ್ಲರನ್ನು ಉದ್ದೇಶಿಸಿ “ಶಿಷ್ಯರೇ, ಇವರಿಬ್ಬರಲ್ಲೂ ಆತ್ಮವಿಶ್ವಾಸದ ವ್ಯತ್ಯಾಸವಿದೆ. ಒಬ್ಬ ಹೆದರಿ ಹಿಂಜರಿದ, ಇನ್ನೊಬ್ಬ ಮುನ್ನಡೆದ. ಹೀಗೆ ನಾವು ಕೂಡ ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯಬೇಕು. ಯಾವ ತೊಂದರೆಗೂ ಬಗ್ಗದೆ ಅದನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ, ಆತ್ಮಸ್ಥೈರ್ಯ ನಮ್ಮಲ್ಲಿರಬೇಕು. ಕಷ್ಟ ಬಂದಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಬದುಕಿನ ಏಳುಬೀಳುಗಳನ್ನು ನಾನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಸದಾ ನಮ್ಮಲ್ಲಿರಬೇಕು. ಯಾವ ಸಮಸ್ಯೆಯು ನಮ್ಮ ಮನೋಸ್ಥೈರ್ಯಕ್ಕಿಂತ ದೊಡ್ಡದಲ್ಲ. ಅದನ್ನು ಮೆಟ್ಟಿ ನಿಂತು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ, ಮತ್ತೊಬ್ಬರಿಗೆ ಮಾದರಿಯಾಗಿ ಬದುಕಬೇಕು. “ಎಲ್ಲಿ ಆತ್ಮವಿಶ್ವಾಸವಿರುತ್ತದೆಯೋ , ಅಲ್ಲಿ ಜಯ ಕಟ್ಟಿಟ್ಟ ಬುತ್ತಿ ” ಎಂದು ಉಪದೇಶ ಮುಗಿಸಿದರು.
ಇದೆಲ್ಲವನ್ನು ಆಲಿಸುತ್ತ ಅಲ್ಲೇ ಕುಳಿತ್ತಿದ್ದ ಸೀತಾ ತಾನು ತನ್ನ ಮೋಸಗಾರ ಪತಿಯ ಎದುರು ಆತ್ಮವಿಶ್ವಾಸದಿಂದ ನಿಂತು ಸಾಧಿಸಿ ತೋರಿಸಬೇಕು ಎಂದು ನಿರ್ಧರಿಸಿ ಎದ್ದು ನಿಂತಳು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026
    In ದಿನಪತ್ರಿಕೆ
  • ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ
    In (ರಾಜ್ಯ ) ಜಿಲ್ಲೆ
  • ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸೆ.೨೪ರಂದು ೧೫ ಗ್ರಾಮಗಳಲ್ಲಿ ಪಿಂಚಣಿ ಅದಾಲತ್
    In (ರಾಜ್ಯ ) ಜಿಲ್ಲೆ
  • ಮೈಸೂರು ದಸರಾ: ಕನ್ನಡ ಪುಸ್ತಕಗಳ ಮಾರಾಟ ಮೇಳಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರ ಆರೋಗ್ಯ-ಮಕ್ಕಳ ಶಿಕ್ಷಣಕ್ಕೆ ಆದ್ಯತೆ
    In (ರಾಜ್ಯ ) ಜಿಲ್ಲೆ
  • ಹೊಸನಗರ ಹಳ್ಳದ ಸೇತುವೆ ಮೇಲೆ ಸಂಚಾರಕ್ಕೆ ಸಂಚಕಾರ
    In (ರಾಜ್ಯ ) ಜಿಲ್ಲೆ
  • ಬೇನಾಳ ಗ್ರಾಮಕ್ಕೆ ನುಗ್ಗಿದ ಮೊಸಳೆ ಮರಿ :ಆತಂಕದಲ್ಲಿ ಗ್ರಾಮಸ್ಥರು
    In (ರಾಜ್ಯ ) ಜಿಲ್ಲೆ
  • ಶಿವಾನಂದ ತಗಡೂರ ಗೆ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.