ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಭಾರತ ವೀರಶೈವ ಲಿಮಗಾಯತ ಮಹಾಸಭಾ ಜಿಲ್ಲಾ ಘಟಕ ವಿಜಯಪುರದಿಂದ ೨೦೨೫-೨೬ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವ್ಯಾಸಂಗ ಮಾಡಿ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಪಾಸಾದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿದಾರರು ಬಿ.ಎ., ಬಿ.ಕಾಂ, ಬಿ.ಎಸ್.ಸಿ., ಬಿ.ಎ.ಎಂ.ಎಸ್. ಬಿ.ಬಿ.ಎ. ಬಿ.ಸಿ.ಎ. ಬಿ.ಎಸ್.ಸಿ. ನರ್ಸಿಂಗ್ ಬಿ. ಫಾರ್ಮಸಿ, ಎಲ್.ಎಲ್.ಬಿ. ಪದವಿ ಪಾಸಾದವರಾಗಿರಬೇಕು.
ವಿದ್ಯಾರ್ಥಿ ವಿಜಯಪುರ ಜಿಲ್ಲೆಯವರಾಗಿದ್ದು, ಜಿಲ್ಲೆಯ ಯಾವುದೇ ಕಾಲೇಜಿನಿಂದ ಪದವಿ ಪಡೆದವರಾಗಿರಬೇಕು. ಪ್ರತಿ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಯನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುವುದು. ಸ್ವವಿವರ ಅರ್ಜಿಯೊಂದಿಗೆ ಆಧಾರ ಕಾರ್ಡ ಹಾಗೂ ದೃಢೀಕರಿಸಲ್ಪಟ್ಟ ಪದವಿ ಅಂಕಪಟ್ಟಿಯನ್ನು ಲಗತ್ತಿಸಿ, ದಿನಾಂಕ ೨೦-೮-೨೦೨೬ ರೊಳಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬಂಜಾರಾ ಹೈಸ್ಕೂಲ ಎದುರು ವಿಜಯಪುರ ೫೮೬೧೦೩ ಈ ವಿಳಾಸಕ್ಕೆ ಕಳಿಸಿ ಕೊಡಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ವಿ.ಸಿ. ನಾಗಠಾಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ. ೯೯೦೦೫೮೨೫೧೭, ೯೪೪೮೨೭೯೨೫೦ ಸಂಪರ್ಕಿಸಲು ಕೋರಲಾಗಿದೆ.
