Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿಗಳ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ ಇನ್ನಿಲ್ಲ!

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆ

ಆ.೦೨ ರಂದು ಸುಧಾ ಪಾಟೀಲ್ ಅಭಿನಂದನಾ ಕೃತಿ ಲೋಕಾರ್ಪಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂಘದ ಅಭಿವೃದ್ಧಿಯಲ್ಲಿ ಗ್ರಾಹಕರ ಪಾತ್ರ ಬಹುಮುಖ್ಯ
(ರಾಜ್ಯ ) ಜಿಲ್ಲೆ

ಸಂಘದ ಅಭಿವೃದ್ಧಿಯಲ್ಲಿ ಗ್ರಾಹಕರ ಪಾತ್ರ ಬಹುಮುಖ್ಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ದೇವರಹಿಪ್ಪರಗಿ ಸಮೃದ್ಧಿ ಸಹಕಾರ ಸಂಘದ ೫ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ಅಭಿಮತ

ಉದಯರಶ್ಮಿ ದಿನಪತ್ರಿಕೆ

ದೇವರಹಿಪ್ಪರಗಿ: ಸಂಘದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಸದಸ್ಯರು, ಠೇವುದಾರರು, ನಿರ್ದೇಶಕ ಮಂಡಳಿ ಸೇರಿದಂತೆ ಗ್ರಾಹಕರ ಪಾತ್ರ ಬಹುಮುಖ್ಯವಾಗಿದೆ ಎಂದು ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷೆ ಸಂಗೀತಾ ನಾಯಿಕ್ ಹೇಳಿದರು.
ಪಟ್ಟಣದ ಕಲ್ಮೇಶ್ವರ ಮಂಗಲ ಭವನದಲ್ಲಿ ಶುಕ್ರವಾರ ಜರುಗಿದ ಸಮೃದ್ಧಿ ಸಹಕಾರ ಸಂಘದ ೫ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಪ್ರಗತಿಗೆ ಕಳೆದ ೪ ವರ್ಷಗಳಿಂದ ನೀಡುತ್ತಿರುವ ಸದಸ್ಯರ ಸಹಕಾರ ಶ್ಲಾಘನೀಯ ಎಂದರು.
ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಒಟ್ಟು ೯೯೮ ಸದಸ್ಯ ಬಲದ ಸಂಘವು ೧೦.೨೪ ಲಕ್ಷ ಶೇರು ಬಂಡವಾಳದೊಂದಿಗೆ ಕಾರ್ಯಾರಂಭ ಮಾಡಿ ಈಗ ೧.೨೪ ಕೋಟಿ ಶೇರು ಬಂಡವಾಳದೊಂದಿಗೆ ಸುಮಾರು ೧೧.೦೩ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ೨೦೨೫-೨೬ನೇ ಸಾಲಿನಲ್ಲಿ ೫೧.೪೭ ಕೋಟಿ ವ್ಯವಹಾರ ನಡೆಸಿ ೪೬.೬೬ ಲಕ್ಷ ರೂ.ಗಳ ನಿವ್ವಳ ಆದಾಯ ಗಳಿಸಿದೆ. ಮುಂಬರುವ ವರ್ಷಗಳಲ್ಲಿ ಠೇವುಗಳನ್ನು ರೂ. ೧೫ ಕೋಟಿಗೆ ಹೆಚ್ಚಿಸಿಕೊಳ್ಳುವುದು. ಶೇರು ಬಂಡವಾಳವನ್ನು ರೂ. ೨ ಕೋಟಿಗಳಿಗೆ ಹೆಚ್ಚಿಸಿಕೊಳ್ಳುವುದು. ಹಾಗೂ ದುಡಿಯುವ ಬಂಡವಾಳವನ್ನು ರೂ.೨೦ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಸAಘದ ಮಾರ್ಗದರ್ಶಕ ಡಾ.ಆರ್.ಆರ್.ನಾಯಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಾಧನೆಯ ಹಿಂದೆ ಸದಸ್ಯರ, ಗ್ರಾಹಕರ ಸದ್ಭಾವನೆ ಸಹಕಾರ, ಆಡಳಿತ ಮಂಡಳಿ ಸದಸ್ಯರ ಕಳಕಳಿ ಪ್ರಾಮಾಣಿಕ ಸೇವೆ ಹಾಗೂ ಮಾರ್ಗದರ್ಶನ, ಸಿಬ್ಬಂದಿಗಳ ಅವಿರತ ಪರಿಶ್ರಮ ಹಾಗೂ ಸೇವಾ ಮನೋಭಾವನೆಗಳೇ ಮುಖ್ಯ ಕಾರಣಗಳಾಗಿವೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ ಕುದರಿ, ಚೈತನ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗುರುರಾಜ ಕುಲಕರ್ಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಲೀಲಾವತಿಗೌಡ (ಸಹಕಾರ), ಶೈಲಜಾ ಸ್ಥಾವರಮಠ (ಸಾಮಾಜಿಕ), ವಿ.ಸಿ.ಕುಲಕರ್ಣಿ(ಅಂಚೆ) ಜಿ.ಎಸ್.ಕರಭಂಟನಾಳ(ಉದ್ಯಮ), ಎಮ್.ಎಚ್.ಪಾನಪರೋಶ(ಶಿಕ್ಷಣ) ಬಿ.ಸಿ.ಹಿರೇಮಠ (ರಂಗಭೂಮಿ) ಅವರನ್ನು ಸನ್ಮಾನಿಸಲಾಯಿತು. ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಿರ್ದೇಶಕರಾದ ಪ್ರಭುದೇವ ಹಿರೇಮಠ, ಬಿ.ಎನ್.ಬಬಲೇಶ್ವರ, ಕೆ.ಎಸ್.ಕೋರಿ, ಎ.ಕೆ.ಹಿರೇಮಠ, ವೆಂಕಟೇಶ ಕುಲಕರ್ಣಿ, ಉಮೇಶ ಹಳಪಾಣಿ, ಗುರು ಕರಭಂಟನಾಳ, ಮಂಜುನಾಥ ಒಂಟೆತ್ತಿನ್, ಸುಭಾಸ್ ಜಾಧವ, ಶಕುಂತಲಾ ಬಿರಾದಾರ ಸೇರಿದಂತೆ ಬಿ.ಆರ್.ಬಿರಾದಾರ, ಅಯ್ಯನಗೌಡ ಬಿರಾದಾರ, ಪಿ.ಎನ್.ಗಂಜ್ಯಾಳ, ಸಂಗಪ್ಪ ತಡವಲ್, ಎ.ಕೆ.ನಾಡಗೌಡ ಸಹಿತ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿದ್ಯಾರ್ಥಿಗಳ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ ಇನ್ನಿಲ್ಲ!

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆ

ಆ.೦೨ ರಂದು ಸುಧಾ ಪಾಟೀಲ್ ಅಭಿನಂದನಾ ಕೃತಿ ಲೋಕಾರ್ಪಣೆ

ಕೃತಕ ಬುದ್ಧಿಮತ್ತೆಯ (AI) ಇತಿಹಾಸ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿದ್ಯಾರ್ಥಿಗಳ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ ಇನ್ನಿಲ್ಲ!
    In (ರಾಜ್ಯ ) ಜಿಲ್ಲೆ
  • ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಆ.೦೨ ರಂದು ಸುಧಾ ಪಾಟೀಲ್ ಅಭಿನಂದನಾ ಕೃತಿ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಕೃತಕ ಬುದ್ಧಿಮತ್ತೆಯ (AI) ಇತಿಹಾಸ
    In ವಿಶೇಷ ಲೇಖನ
  • ಮಹಿಳೆಯರಿಗಾಗಿ ಸ್ವಾವಲಂಬಿ ಸಬಲಾ ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಲಿ
    In (ರಾಜ್ಯ ) ಜಿಲ್ಲೆ
  • ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಪತ್ರಕರ್ತರ ಜವಾಬ್ದಾರಿ
    In (ರಾಜ್ಯ ) ಜಿಲ್ಲೆ
  • ತಾಳಿಕೋಟಿ: ಕಾನಿಪ ಸಂಘದಿಂದ ಪತ್ರಿಕಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಅಥ್ಲೆಟಿಕ್ಸ್ ಕ್ರೀಡಾಪಟುಗಳ ಆಯ್ಕೆ ಶಿಬಿರ ಆ.2 ರಂದು
    In (ರಾಜ್ಯ ) ಜಿಲ್ಲೆ
  • ಪರೀಕ್ಷೆ ಮತ್ತು ಅಭ್ಯಾಸ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.