ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶೇ ೬೪% ರಸ್ಟು ಫಲಿತಾಂಶ ಬಂದಿದೆ.
ಅಕ್ಕಮ್ಮ ಯರಗಲ್ ೬೦೭(೯೭%) ಅಂಕ ಪಡೆದು ಪ್ರಥಮ ಸ್ಥಾನ, ಪಲ್ಲವಿ ಸಿನ್ನೂರ ೫೯೩(೯೪%) ಅಂಕ ಪಡೆದು ದ್ವಿತೀಯ ಸ್ಥಾನ, ಕಾಳಮ್ಮ ಉಕಲಿ ೫೯೦(೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕಿರ್ತಿ ತಂದಿದ್ದಾರೆ. ಹಾಗೆ ೧೧ ವಿದ್ಯಾರ್ಥಿಗಳು ಡಿಸ್ಟಿಂಗಷನ ಪಾಸಾಗಿದ್ದರೆ, ೩೬ ವಿದ್ಯಾರ್ಥಿಗಳು ಪ್ರಥರ್ಮ ದರ್ಜೇಯಲ್ಲಿ ಪಾಸಾಗಿದ್ದಾರೆ, ೨೪ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ಒಟ್ಟು ೧೧೭ ವಿದ್ಯಾರ್ಥಿಗಳಲ್ಲಿ ೭೫ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹರ್ಷ ವೇಕ್ತಪಡಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಎಂ.ಜಿ. ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.