ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮ ಪಂಚಾಯತಿಯ ಅರಳದಿನ್ನಿ ಹಾಗೂ ಚಿಮ್ಮಲಗಿ ಗ್ರಾಮ ಪಂಚಾಯತಿಯ ಚಿಮ್ಮಲಗಿ ಪು.ಕೆ. ಕ್ಷೇತ್ರಕ್ಕೆ, ಇಂಡಿ ತಾಲೂಕಿನ ಸಾಲೋಟಗಿ ಹಾಗೂ ಖೇಡಗಿ ಗ್ರಾಮ ಪಂಚಾಯತ್, ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮ ಪಂಚಾಯಿತಿಯ ನಾಗರಾಳ ಹುಲಿ, ಮುತ್ತಗಿ ಹಾಗೂ ಬ್ಯಾಕೋಡ ಗ್ರಾಮ ಪಂಚಾಯತಿಯ ಜಯವಾಡಗಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮ ಪಂಚಾಯತಿಯ ಕಾತ್ರಾಳ ಕ್ಷೇತ್ರಕ್ಕೆ, ವಿಜಯಪುರ ತಾಲೂಕಿನ ಕನ್ನೂರ, ನಾಗಠಾಣ, ಜುಮನಾಳ ಹಾಗೂ ಹೊನಗನಹಳ್ಳಿ ಗ್ರಾಮ ಪಂಚಾಯತಿಗೆ, ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತಿಗೆ, ತಾಳಿಕೋಟೆ ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯ ತಮದಡ್ಡಿ, ಚಡಚಣ ತಾಲೂಕಿನ ಲೋಣಿ ಬಿ.ಕೆ. ಮತ್ತು ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ಉಪಚುನಾವಣೆ ವೇಳಾಪಟ್ಟಿಯಂತೆ ನಾಮಪತ್ರಗಳನ್ನು ಸಲ್ಲಿಸಲು ದಿನಾಂಕ : ೧೨-೧೧-೨೦೨೪ ಕೊನೆಯ ದಿನಾಂಕವಾಗಿದೆ. ದಿನಾಂಕ : ೧೩-೧೧-೨೦೨೪ ನಾಮಪತ್ರಗಳ ಪರಿಶೀಲನೆ, ದಿನಾಂಕ : ೧೫-೧೧-೨೦೨೪ ರಂದು ಉಮೇದುವಾರಿಕೆಯಿಂದ ಹಿಂತೆಗೆದುಕೊಳ್ಳಲು ಕೊನೆಯ ದಿನ, ದಿನಾಂಕ : ೨೩-೧೧-೨೦೨೪ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ ಮತದಾನ ನಡೆಸಬೇಕಾದ ದಿನ, ದಿನಾಂಕ : ೨೬-೧೧-೨೦೨೪ರಂದು ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
