ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಹಣಿಗಳಲ್ಲಿ ವಕ್ಪ್ ಬೋರ್ಡ ಹೆಸರು ದಾಖಲಿಸಲು ಮುಂದಾಗಿದ್ದ ರಾಜ್ಯ ಸರಕಾರ ಬಿಜೆಪಿ ಪಕ್ಷದ ಹೋರಾಟಕ್ಕೆ ಮಣಿದು ಪಹಣಿಯಲ್ಲಿ ಸೇರಿಸಿದ್ದ ವಕ್ಫ್ ಹೆಸರನ್ನು ಅಳಿಸಿ ಹಾಕಿದೆ. ಅದಾಗ್ಯೂ ಯಾವುದಾದರೂ ರೈತರ ಪಹಣಿಯಲ್ಲಿ ವಕಪ್ ಬೋರ್ಡ ಹೆಸರು ಉಳಿದಿದ್ದರೆ ಕೂಡಲೆ ಬಿಜೆಪಿ ಮುಖಂಡರ ಗಮನಕ್ಕೆ ತರಬೇಕೆಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ರೈತರ ಪಹಣಿಯಲ್ಲಿ ವಕಪ್ ಬೋರ್ಡ ಹೆಸರು ತೇಲಿಸಿದ್ದಕ್ಕೆ ಖಂಡಿಸಿ ನ್ಯಾಯಾಂಗದ ಮೊರೆ ಹೋಗಲು ನಿರ್ಧರಿಸಿದ್ದರಲ್ಲದೆ, ದೊಡ್ಡ ಹೋರಾಟದ ಸುಳಿವು ನೀಡಿದ್ದರು. ಅವರ ಹೇಳಿಕೆಗೆ ಬೆದರಿದ ಸರಕಾರ ಕೊನೆಗೂ ಪಹಣಿಗಳಲ್ಲಿನ ವಕಪ್‌ಬೋರ್ಡ ಹೆಸರು ಅಳಿಸಿ ಹಾಕಿದೆ ಎಂದರು.
ಭೀಮರಾಯ ಮದರಖಂಡಿ, ಪ್ರಕಾಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಮಲ್ಲು ಗುಡ್ಲ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.

