ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಪ್ರಯಾಣಿಕರ ಅಹವಾಲು-ಕುಂದುಕೊರತೆಗಳನ್ನು ಆಲಿಸಲು ನವೆಂಬರ್ ೪ರಂದು ಮಧ್ಯಾಹ್ನ ೩-೩೦ರಿಂದ ೪-೩೦ರವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು-ಪ್ರಯಾಣಿಕರು ದೂರವಾಣಿ ಸಂಖ್ಯೆ : ೬೩೬೬೪೨೩೮೮೭ಗೆ ಕರೆ ಮಾಡುವ ಮೂಲಕ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರಿಗೆ ಸೌಕರ್ಯದ ಅಹವಾಲು-ಕುಂದು ಕೊರತೆಗಳಿದ್ದಲ್ಲಿ ಪರಿಹರಿಸಿಕೊಳ್ಳುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
