ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಪ್ರೋ ಕಬ್ಬಡ್ಡಿ ಲೀಗ್ ೧೧ರ ತಂಡಗಳಿಗೆ ಚಿಮ್ಮಡ ಗ್ರಾಮದಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಇಲ್ಲಿನ ಭೂಮಿಕಾ ವಸತಿ ಶಾಲೆಯ ವಿದ್ಯಾರ್ಥಿಗಳಾದ ಚಂದ್ರನಾಯ್ಕ ಬೆಂಗಳೂರು ಬುಲ್ಸ ತಂಡಕ್ಕೆ ಹಾಗೂ ಸತ್ಯಪ್ಪಾ ಮಟ್ಟಿ ಪುನೇರಿ ಪಲ್ಟನ್ ತಂಡಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಸ್ಪರ್ದಾಳುಗಳಿಗೆ ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಾಲಾ ಅಶೋಕ ಮೋಟಗಿ ಹಾಗೂ ಭೂಮಿಕಾ ವಿದ್ಯಾ ಸಂಸ್ಥೆಯ ಸಂಸ್ಥಾಪಕಅಧ್ಯಕ್ಷ ಮುತ್ತು ಢವಳೇಶ್ವರ ಅಭಿನಂದಿಸಿದ್ದಾರೆ.

