ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇವರಹಿಪ್ಪರಗಿ ೧೧೦ ಕೆವ್ಹಿ ಹತ್ತಿರ ಲಿಲೋ ಗೋಪುರದ ಮೇಲೆ ಜಂಪ್ ಜೋಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ೧೧೦ ಕೆವ್ಹಿ ಅಥರ್ಗಾ, ದೇವರಹಿಪ್ಪರಗಿ ಹಿರೇಮಸಳಿ, ೩೩ ಕೆವ್ಹಿ ಕಡ್ಲೇವಾಡ, ಕೋರವಾರ ವಿದ್ಯುತ್ ವಿತರಣಾ ಕೇಂದ್ರಗಳಿಮದ ಸರಬರಾಜಾಗುವ ಎಲ್ಲ ೧೧ ಕೆವ್ಹಿ ಮಾರ್ಗಗಳಿಗೆ ಅ.೨೮ರಂದು ಬೆಳಿಗ್ಗೆ ೬-೩೦ ರಿಂದ ೯-೩೦ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
