ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ. ಎಲ್. ಡಿ. ಇ ಸಂಸ್ಥೆ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ಇಂದಿನಿಂದ 60 ದಿನಗಳವರೆಗೆ ಕಾಲ ಕಿಡ್ನಿ ಸಂಬಂಧಿಸಿದ ರೋಗಿಗಳಿಗೆ ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ತಿಳಿಸಿದ್ದಾರೆ.
ದಿ.21ಅಕ್ಟೋಬರ್ ನಿಂದ ದಿ.21 ಡಿಸೆಂಬರ್ ವರೆಗೆ ಬೆ.9 ರಿಂದ ಸಂ.4 ಗಂಟೆಯವರೆಗೆ ಹೆಚ್ಚಿನ ಕ್ರೀಯಾಟೆನಿನ್ ಹೊಂದಿರುವ ರೋಗಿಗಳಿಗೆ ವಿಶೇಷ ಸಲಹೆ ಮತ್ತು ಚಿಕಿತ್ಸೆಯನ್ನು ಈ ಶಿಬಿರದಲ್ಲಿ ಉಚಿತವಾಗಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಡಾ.ಅಶ್ವಿನಿ ಸಜ್ಜನವರ ಮೊ.ನಂ: 7406737888, 8073853981 ಸಂಪರ್ಕಿಸಬಹುದು ಎಂದು ಪ್ರಾಚಾರ್ಯ ಡಾ.ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
