ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವಿಜಯಪುರ ವತಿಯಿಂದ ೨೦೨೪-೨೫ನೇ ಸಾಲಿನ ಆಯವ್ಯಯ ಕಂಡಿಕೆ ೨೫(೩)ರಲ್ಲಿ ಘೋಷಿಸಿರುವ ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ಪಡೆಯಲು ವಿಜಯಪುರ ಜಿಲ್ಲೆಯಲ್ಲಿರುವ ಕನಿಷ್ಠ ೨೦ಕ್ಕಿಂತ ಹೆಚ್ಚು ಕುರಿ/ಮೇಕೆಗಳನ್ನು ಹೊಂದಿರುವ ಅರ್ಹ ಸಂಚಾರಿ ಕುರಿಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಯೋಜನೆಯ ಸೌಲಭ್ಯ ಪಡೆಯಲು ಸಂಚಾರಿ ಕುರಿಗಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಪಶು ಚಿಕಿತ್ಸಾಲಯ, ಪಶು ವೈದ್ಯಾಧಿಕಾರಿಗನ್ನು ಸಂಪರ್ಕಿಸಿ ನಿಗಧಿತ ನಮೂನೆಯನ್ನು ಪಡೆದು ವಲಸೆ ಹೋಗುವುದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಂದ ಮಹಜರು ಪ್ರಮಾಣ ಪತ್ರ ಪಡೆದು ಸಂಬಂಧಿಸಿದ ಪಶು ವೈದ್ಯಾಧಿಕಾರಿಗಳಿಂದ ಕನಿಷ್ಠ ೨೦ ಕುರಿ/ಮೇಕೆ ಹೊಂದಿರುವ ಧೃಡೀಕರಣ ಪತ್ರ ಪಡೆದು ಸೂಕ್ತ ದಾಖಲೆಗಳೊಂದಿಗೆ ಪಶು ಚಿಕಿತ್ಸಾಲಯ, ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಸಹಾಯಕ ನಿರ್ದೇಶಕರ ಕಚೇರಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಅಥವಾ ದೂರವಾಣಿ ಸಂಖ್ಯೆ : ೦೮೩೫೨-೨೦೦೦೭೯ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
