ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಣಿಯಾದ ಫಲಾನುಔನಿಗಳಿಗೆ ಮೇಷನ್ ಕಿಟ್, ರೋಡ ನಿರ್ಮಾಣ ಮತ್ತು ಟೈಲ್ಸ್ ಲೇಯರ್ ಟೂಲ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ನೋಂದಾಯಿಸಿ ಒಂದು ವರ್ಷ ಪೂರ್ಣಗೊಂಡಿರುವ ಕಟ್ಟಡ ಕಾರ್ಮಿಕರು ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ್ ಕಾರ್ಡ್, ಮತ್ತು ಫಲಾನುಭವಿಯ ಭಾವಚಿತ್ರ, ಸದರಿ ದಾಖಲೆಗಳನ್ನು ದಿನಾಂಕ ೨೧-೧೦-೨೦೨೪ರ ಒಳಗಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ, ಬಂದಾಳ ರಸ್ತೆ, ಬಮ್ಮಣ್ಣಿ ಬಿಲ್ಡಿಂಗ್ ಸಿಂದಗಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇಲೆ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಸಿಂದಗಿಯ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
