ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸ್, ಪೇಲ್ ಆದ ಕನಿಷ್ಠ ೧೮ ವರ್ಷ, ಗರಿಷ್ಠ ೪೦ ವರ್ಷ ವಯೋಮಿತಿಯ ಒಳಗಿನ ಯುವಕ ಯುವತಿಯರಿಂದ ಹೊಲಿಗೆ ತರಬೇತಿ ಹಾಗೂ ವಿಡಿಯೋಗ್ರಾಫಿ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳುರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ನಡೆಯಲಿದ್ದು, ಹೊಲಿಗೆ ತರಬೇತಿ ಶಿಬಿರ ೦೭-೧೧-೨೦೨೪ರಿಂದ ೨೬-೧೧-೨೦೨೪ರವರೆಗೆ ೨೦ ದಿನಗಳ ಕಾಲ, ವಿಡಿಯೋಗ್ರಾಫಿ ತರಬೇತಿ ಶಿಬಿರ ೧೫-೧೧-೨೦೨೪ ರಿಂದ ೨೬-೧೧-೨೦೨೪ರವರೆಗೆ ೧೨ ದಿನಗಳ ಕಾಲ ನಡೆಯಲಿದೆ.
ಆಸಕ್ತಿಯುಳ್ಳ ಯುವಕ ಯುವತಿಯರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಕೆ ವಿಜಯಪುರ ಕಾರ್ಯಾಲಯದಿಂದ ಅರ್ಜಿಗಳನ್ನು ಪಡೆದುಕೊಂಡು ದಿನಾಂಕ ೨೮-೧೦-೨೦೨೪ರಂದು ಸಾಯಂಕಾಲ ೫ ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ ೦೮೩೫೨-೨೫೧೦೮೫ ಮೊಬೈಲ್ ನಂ :೮೭೯೨೧೮೫೧೪೧ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
