ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ೧೩ ಗ್ರಾಮ ಪಂಚಾಯತಿಯ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದೆ.
ಇಂಡಿ ತಾಲೂಕಿನ ಅರ್ಜುಣಗಿ ಬಿ.ಕೆ., ಗುಬ್ಬೇವಾಡ ಹಾಗೂ ಸಂಗೋಗಿ, ಆಲಮೇಲ ತಾಲೂಕಿನ ಕಕ್ಕಳಮೇಲಿ ಮತ್ತು ರಾಮನಳ್ಳಿ, ವಿಜಯಪುರ ತಾಲೂಕಿನ ಕುಮಟಗಿ, ನಿಡಗುಂದಿ ತಾಲೂಕಿನ ಗಣಿ ಆರ್.ಸಿ, ಬಳಬಟ್ಟಿ ಮತ್ತು ಬೇನಾಳ ಆರ್.ಸಿ, ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ, ಸಿಂದಗಿ ತಾಲೂಕಿನ ನಾಗಾವಿ ಬಿ,ಕೆ ಮತ್ತು ಕನ್ನೊಳ್ಳಿ ಹಾಗೂ ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತಿಯ ಗ್ರಂಥಾಲಯಗಳ ಮೇಲ್ವಿಚಾರಕರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದ್ದು, ಸದರಿ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ದಿನಾಂಕ:೨೩-೧೦-೨೦೨೪ರೊಳಗಾಗಿ ಜಿಲ್ಲಾ ಪಂಚಾಯತಿಯ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
