ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ಜಿಲ್ಲಾ ಮಟ್ಟದ ಆಟಗಳಲ್ಲಿ ಬಾಲಕರ ಥ್ರೋಬಾಲ್‌ದಲ್ಲಿ ಪ್ರಥಮಸ್ಥಾನ, ಬಾಲಕರ ನೆಟ್‌ಬಾಲ್ ದ್ವಿತೀಯ, ಬಾಲಕಿಯರ ನೆಟ್‌ಬಾಲ್ ದ್ವಿತೀಯ, ಬಾಲಕಿಯರ ಹ್ಯಾಂಡ್‌ಬಾಲ್, ಚೆಸ್‌ನಲ್ಲಿ ದ್ವಿತೀಯ ಸ್ಥಾನಗಳನ್ನು ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ೨೯ ಜನ ವಿದ್ಯಾರ್ಥಿಗಳು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಸುನೀಲ ಪಾಟೀಲ, ಎನ್.ಬಿ.ಪೂಜಾರಿ, ಶಿವಶರಣ ಬೂದಿಹಾಳ, ಬಿ.ಬಿ.ಜಮಾದಾರ, ಡಾ. ಶರಣಬಸವ ಜೋಗೂರ, ಎಸ್.ಜಿ.ಮಾರ್ಸನಳ್ಳಿ, ಎಸ್.ಎಚ್.ಜಾಧವ, ಡಾ.ವಿಶ್ವನಾಥ ನಂದಿಕೋಲ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ, ರಾಹುಲ ದಾಸರ್, ಸುಮಿತ್ರಾ ಕರನಾಳ, ಭಾಗ್ಯ ಕೋರಿ, ಎ.ಬಿ.ಬಮ್ಮಣ್ಣಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

