ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುದೀಪ್ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪ್ರಾಧ್ಯಾಪಕಿ ಡಾ ನಂದಾ ವಾರದ, ಹಾಗೂ ಪ್ರಾಧ್ಯಾಪಕ ಗುಲಾಂ ಮೈಹಿಬೂಬಸಾಬ್ ಇವರುಗಳಿಗೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಗುರುವಾರ ಸನ್ಮಾನಿಸಿ ಗೌರವಿಸಿ ಶುಭಹಾರೈಸಿ
ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಈರ್ವರೂ ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದ ಸ್ಥಳೀಯರಿಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ 14 ವರ್ಷ ಸೇವೆ ಸಲ್ಲಿಸಿದ ಡಾ ನಂದಾ ವಾರದ ಹಾಗೂ 7 ವರ್ಷ ಸೇವೆ ಸಲ್ಲಿಸಿದ ಗುಲಾಂ ಮೈಹಿಬೂಬಸಾಬ್ ಈರ್ವರ ಸೇವೆ ಅನನ್ಯ ಎಂದು ಗುಣಗಾನ ಮಾಡಿದರು.
ಡಾ ಸಿದ್ದಲಿಂಗ ರಾಠೋಡ್, ಡಾ ಬಸಮ್ಮ ಎಸ್, ನಸ್ರೀನ್ ತಾಜ್, ಡಾ ಪೂಜ್ಯಾ ಹೊನ್ನುಟಗಿ, ಡಾ ಯಂಕನಗೌಡ ಪಾಟೀಲ, ಶರಣಪ್ಪ ಗೊಡ್ರಿಹಾಳ, ಸಂದೀಪ್ ಸಂಶಿಕರ್, ಸಂಗಪ್ಪ ಪಟ್ಟಣಕರ್, ಮಾಸುಮ ಅಲಿ ನಾಶಿ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

