ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಬಿಎ ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಅಮೃತಾ ಯಾತನೂರ ಶೇ.೯೧ ಪ್ರಥಮ ಸ್ಥಾನ, ಶಾರದಾ ಗಾಡದ ಶೇ.೯೦ ದ್ವಿತೀಯ ಸ್ಥಾನ, ಶಿಲ್ಪಾ ಮಠ ಶೇ.೮೯.೮ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಶ್ವರ್ಯ ಉಡಚಾಣ ಶೇ.೮೯.೧೪, ಭಾಗ್ಯಶ್ರೀ ಗುತ್ತರಗಿ ಶೇ.೮೮.೫೭ ಪಡೆದುಕೊಂಡಿದ್ದಾರೆ. ಈ ಬಾರಿ ಮಹಾವಿದ್ಯಾಲಯದ ಪಲಿತಾಂಶ ೧೦೦ಕ್ಕೆ ೧೦೦ರಷ್ಟಾಗಿದೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಹಾಗೂ ನಿರ್ದೇಶಕ ಮಂಡಳಿ ಮತ್ತು ಪ್ರಾಚಾರ್ಯ ಗುರು ಕಡಣಿ, ಮಾರ್ಗದರ್ಶಕರಾದ ಆರ್.ಬಿ.ಗೋಡಕರ, ಕೆ.ಎಚ್. ಸೋಮಾಪೂರ, ಆಯ್.ಬಿ. ಬಿರಾದಾರ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

