ವಿಜಯಪುರ: ಸಿಬ್ಬಂದಿ ನೇಮಕಾತಿ ಆಯೋಗ (ಕೆಕೆಆರ್) ಬೆಂಗಳೂರು ಕೇಂದ್ರ ವತಿಯಿಂದ ಸಶಸ್ತç ಪೋಲಿಸ್ ಮತ್ತು ಎಸ್‌ಎಸ್‌ಎಫ್ ಪಡೆಗಳಲ್ಲಿ ಕಾನ್ಸ್ಟೆಬಲ್ ಮತ್ತು ಆಸ್ಸಾಂ ರೈಫಲ್ಸ್ನಲ್ಲಿ ರೈಫಲ್‌ಮ್ಯಾನ್ (ಜಿಡಿ) ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ೧೮ ರಿಂದ ೨೩ ವರ್ಷ ವಯೋಮಾನದ ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ : ೩೧-೧೨-೨೦೨೩ ಕೊನೆಯ ದಿನವಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು www.ssckar.kar.nic.in & https:ssc.nic.in ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮಹಿಳೆಯರಿಗೆ ಮೀಸಲಾಗಿರುವ ೨೭೯೯ ಹುದ್ದೆಗಳನ್ನು ಸೇರಿಸಿ ೨೬,೧೪೬ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಜರುಗಲಿದ್ದು, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಕೋಜಿಕೋಡ್ ಹಾಗೂ ತ್ರೀಶೂರ್ ಪರೀಕ್ಷಾ ಕೇಂದ್ರಗಳಿವೆ. ಎಸ್ಸಿ-ಎಸ್ಟಿ, ಮಹಿಳೆ ಹಾಗೂ ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿರುವುದಿಲ್ಲ. ಸಾಮಾನ್ಯರು ೧೦೦ ಶುಲ್ಕ ಪಾವತಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕಾನ್ಸಟೇಬಲ್ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ
Related Posts
Add A Comment
